SSLC, PUC ವಿದ್ಯಾರ್ಥಿಗಳ ಗಮನಕ್ಕೆ: 2025ನೇ ಸಾಲಿನ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ!

ಬೆಂಗಳೂರು:- 2025ನೇ ಸಾಲಿನ SSLC ಮತ್ತು 2nd ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ವೇಳಾಪಟ್ಟಿ ಪ್ರಕಟ ಮಾಡಿದೆ. ಮಾರ್ಚ್ 1ರಿಂದ ಮಾರ್ಚ್ 19ರವರೆಗೆ ದ್ವಿತೀಯ ಪಿಯು ಪರೀಕ್ಷೆ-1 ನಡೆಯಲಿದೆ. ಮಾರ್ಚ್ ,20 ರಿಂದ ಏಪ್ರಿಲ್ 2ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ-1 ನಡೆಸಲು ನಿರ್ಧರಿಸಿದೆ. ಈ ವೇಳಾಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 16ರವರೆಗೆ ಅವಕಾಶವಿದೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿ
ಮಾರ್ಚ್ 01 ಶನಿವಾರ: ಕನ್ನಡ, ಅರೇಬಿಕ್
ಮಾರ್ಚ್ 03 ಸೋಮವಾರ: ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ, ವ್ಯವಹಾರ, ಅಧ್ಯಯನ
ಮಾರ್ಚ್ 04 ಮಂಗಳವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 05 ಬುಧವಾರ: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾರ್ಚ್ 07 ಶುಕ್ರವಾರ: ಇತಿಹಾಸ, ಭೌತಶಾಸ್ತ್ರ
ಮಾರ್ಚ್ 08 ಶನಿವಾರ: ಹಿಂದಿ
ಮಾರ್ಚ್ 10 ಸೋಮವಾರ: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12 ಬುಧವಾರ: ಮನಃಶಾಸ್ತ್ರ ರಸಾಯನಶಾಸ್ತ್ರ, ಮೂಲ ಗಣಿತ
ಮಾರ್ಚ್ 13 ಗುರುವಾರ: ಅರ್ಥಶಾಸ್ತ್ರ
ಮಾರ್ಚ್ 15 ಶನಿವಾರ: ಇಂಗ್ಲೀಷ್
ಮಾರ್ಚ್ 17 ಸೋಮವಾರ: ಭೂಗೋಳಶಾಸ್ತ್ರ ಜೀವಶಾಸ್ತ್ರ
ಮಾರ್ಚ್ 18 ಮಂಗಳವಾರ: ಸಮಾಜಶಾಸ್ತ್ರ ವಿದ್ಯುನ್ಮಾನಶಾಸ್ತ್ರ ಗಣಕ ವಿಜ್ಞಾನ
ಮಾರ್ಚ್ 19 ಬುಧವಾರ: ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್,ರೀಟೈಲ್, ಬ್ಯೂಟಿ ಅಂಡ್ ವೆಲ್ನೆಸ್ ಪರೀಕ್ಷೆಗಳು ನಡೆಯಲಿವೆ. ಈ ಎಲ್ಲ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.
ಎಸ್ಎಸ್ಎಲ್ಸಿ ತಾತ್ಕಾಲಿಕ ವೇಳಾಪಟ್ಟಿ
ಮಾರ್ಚ್ 20 ಗುರುವಾರ: ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
ಮಾರ್ಚ್ 22 ಶನಿವಾರ: ಸಮಾಜ ವಿಜ್ಞಾನ
ಮಾರ್ಚ್ 24 ಸೋಮವಾರ: ಇಂಗ್ಲಿಷ್, ಕನ್ನಡ
ಮಾರ್ಚ್ 27 ಗುರುವಾರ: ಗಣಿತ, ಸಮಾಜ ಶಾಸ್ತ್ರ
ಏಪ್ರಿಲ್ 01 ಮಂಗಳವಾರ: ಅರ್ಥಶಾಸ್ತ್ರ
ಏಪ್ರಿಲ್ 02 ಬುಧವಾರ: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ ಪರೀಕ್ಷೆಗಳು ನಡೆಯಲಿವೆ. ಈ ಎಲ್ಲ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ.
ನಿಮ್ಮ ಪ್ರತಿಕ್ರಿಯೆ ಏನು?






