ಲಿವಿಂಗ್​​​ ಟುಗೆದರ್​ ರಿಲೇಷನ್ ​ಶಿಪ್​​ ನಲ್ಲಿದ್ದ ಜೋಡಿ ಆತ್ಮಹತ್ಯೆ.! ಕಾರಣವೇನು ಗೊತ್ತಾ..?

ಅಕ್ಟೋಬರ್ 21, 2025 - 14:08
 0  18
ಲಿವಿಂಗ್​​​ ಟುಗೆದರ್​ ರಿಲೇಷನ್ ​ಶಿಪ್​​ ನಲ್ಲಿದ್ದ ಜೋಡಿ ಆತ್ಮಹತ್ಯೆ.! ಕಾರಣವೇನು ಗೊತ್ತಾ..?

ಆನೇಕಲ್: ಲಿವಿಂಗ್​ ಟುಗೆದರ್​ ರಿಲೇಷನ್ ​ಶಿಪ್​​ ನಲ್ಲಿದ್ದ ಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ. ಒಡಿಶಾ ಮೂಲದ ಸೀಮಾ ನಾಯಕ್(25) ಮತ್ತು ರಾಕೇಶ್(23) ಮೃತ ದುರ್ಧೈವಿಗಳಾಗಿದ್ದು, ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಕಿಟಕಿ ಗಾಜು ಒಡೆದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ. ಜೋಡಿ ಮಧ್ಯೆ ಪದೇ ಪದೇ ಕಲಹ ಉಂಟಾಗುತ್ತಿತ್ತು. ಕುಡಿದು ಬಂದು ರಾಕೇಶ್ ಜಗಳ ಮಾಡುತ್ತಿದ್ದ. ಭಾನುವಾರವೂ ಸೀಮಾ ನಾಯಕ್ ಜೊತೆ ಜಗಳ ಮಾಡಿದ್ದ. ಬೆಳಗ್ಗೆ ಎದ್ದಾಗ ರಾಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಸೀಮಾ ಗಮನಕ್ಕೆ ಬಂದಿದೆ.

ಆತನಿಗೆ ಇನ್ನೂ ಜೀವ ಇರಬಹುದು ಎಂಬ ನಂಬಿಕೆಯಿಂದ ರಾಕೇಶ್​ ಉಳಿಸಿಕೊಳ್ಳಲು ಒಂದಿಷ್ಟು ಪ್ರಯತ್ನಗಳನ್ನು ಸೀಮಾ ಮಾಡಿದ್ದಾರೆ. ಆದರೆ ಆತ ಮೃತಪಟ್ಟಿರೋದು ದೃಢವಾಗುತ್ತಿದ್ದಂತೆ ಸೀಮಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಇನ್ನೂ ಸ್ಥಳಕ್ಕೆ ಎಎಸ್​​ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow