ವಾಲ್ಮೀಕಿ ಹಗರಣದಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ: ಶಾಸಕ ಯತ್ನಾಳ್ ಬಾಂಬ್

ಜುಲೈ 2, 2025 - 18:37
 0  13
ವಾಲ್ಮೀಕಿ ಹಗರಣದಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ: ಶಾಸಕ ಯತ್ನಾಳ್ ಬಾಂಬ್

ವಿಜಯಪುರ: ವಾಲ್ಮೀಕಿ ಹಗರಣದಿಂದಲೇ ಕಾಂಗ್ರೆಸ್​ ಸರ್ಕಾರ ಪತನವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ. ವಿಜಯಪುರಲ್ಲಿ ಮಾತಾಡಿದ ಅವರು, ಆದೇಶ ಪ್ರತಿಯನ್ನು ಸ್ವೀಕರಿಸಿದ ನಂತರ ಮುಂದಿನ ಹೋರಾಟದ ದಿಕ್ಕನ್ನು ತೀರ್ಮಾನಿಸೋಣ. ಸರ್ಕಾರ ಸುಪ್ರೀಂಕೋರ್ಟ್ ಗೆ ಹೋಗುವ ಸಾಧ್ಯತೆಯ ಬಗ್ಗೆ ಮಾಹಿತಿ ಇದೆ. ನಾವು ಕೂಡಾ ಕೋರ್ಟ್ ಗೆ ಹೋಗುತ್ತೇವೆ ಎಂದು ಹೇಳಿದರು.

ಪಕ್ಷದಲ್ಲಿ ಕೆಲವರಿಗೆ ಹುದ್ದೆ ನೀಡುವ ಬಗ್ಗೆ ಬಿಜೆಪಿ ನಾಯಕರ ಚಿಂತನೆಗಳಿವೆ. ನಮ್ಮ ತಂಡದವರಿಗೆ ಪಕ್ಷದಲ್ಲಿ ಸ್ಥಾನ ನೀಡಿದರೆ ನನಗೆ ಸಂತೋಷ. ಮೊದಲು ನಮ್ಮ ತಂಡದವರು ಒಳಗೆ ಹೋಗಲಿ, ನಂತರ ನನ್ನನ್ನು ವಾಪಸ್ ಕರೆತರುವ ಬಗ್ಗೆ ಅವರೇ ಮಾತಾಡುತ್ತಾರೆ ಎಂದು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow