ಸಂತೋಷ, ನೆಮ್ಮದಿ ನಿಮ್ಮ ಮನೆಯಲ್ಲಿ ಸದಾ ನೆಲೆಸಲು ಶನಿವಾರ ಈ ಮಂತ್ರಗಳನ್ನು ಪಠಿಸಿ!

ಫೆಬ್ರವರಿ 15, 2025 - 07:00
 0  14
ಸಂತೋಷ, ನೆಮ್ಮದಿ ನಿಮ್ಮ ಮನೆಯಲ್ಲಿ ಸದಾ ನೆಲೆಸಲು ಶನಿವಾರ ಈ ಮಂತ್ರಗಳನ್ನು ಪಠಿಸಿ!

ಶನಿಯನ್ನ ಸೌರವ್ಯೂಹದ ಎರಡನೇ ಅತಿದೊಡ್ಡ ಗ್ರಹ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿ ನಮ್ಮ ಜಾತಕದ ಮೇಲೆ ಬಲವಾದ ಪರಿಣಾಮಗಳನ್ನು ಬೀರುತ್ತದೆ. ಇದು ನಮ್ಮ ಕೆಲಸಗಳಿಗೆ ಅನುಗುಣವಾಗಿ ನಮ್ಮ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪ್ರಭಾವಗಳನ್ನು ಬೀರುತ್ತದೆ. 2 ನೇ, 7 ನೇ, 3 ನೇ, 10 ನೇ ಮತ್ತು 11 ನೇ ಮನೆಯಲ್ಲಿ ಶನಿ ಇದ್ದರೆ ಶುಭವೆಂದು ಪರಿಗಣಿಸಲಾಗುತ್ತದೆ, ಆದರೆ 4 ನೇ, 5 ನೇ ಮತ್ತು 8 ನೇ ಮನೆಯಲ್ಲಿ ಅಶುಭಕರ ಫಲಗಳನ್ನ ನೀಡುತ್ತದೆ. ಇದು ನಮ್ಮ ಜೀವನ ಸಾವು, ಸಂಪತ್ತು, ಮನೆ, ಮಕ್ಕಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಕಾನೂನು ಹಾಗೂ ಆರೋಗ್ಯದ ವಿಚಾರಗಳ ಮೇಲೆ ಸಹ ಪರಿಣಾಮ ಬೀರುತ್ತದೆ. 

ಶನಿವಾರದಂದು ಶನಿ ದೇವನನ್ನು ನಿಜವಾದ ಶ್ರದ್ಧಾ ಮತ್ತು ಭಕ್ತಿಯಿಂದ ಪೂಜಿಸುವ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ. ಶನಿವಾರದಂದು ಭಗವಾನ್ ಶಿವನ ಆಶೀರ್ವಾದ ಪಡೆಯಲು, ಪೂಜೆಯ ಜೊತೆಗೆ ಶನಿ ಮಂತ್ರಗಳನ್ನು ಜಪಿಸಿದರೆ, ಜೀವನದಲ್ಲಿ ಎಲ್ಲಾ ದುಃಖಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಅಲ್ಲದೆ, ಶನಿಯ ದುಷ್ಟ ಕಣ್ಣಿನಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

​ಶನಿ ಮಹಾಮಂತ್ರ:-

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ|

ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ||''

ಶನಿ ದೋಷ ನಿವಾರಣೆ ಮಂತ್ರ:-

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ

ಊರ್ವಾರೂಕಮಿವ ಬಂದನಾನ್‌ ಮೃತ್ಯೋರ್ಮುಕ್ಷೀಯಮಾಮೃತಾತ್‌''
ಶನಿಯ ಪೌರಾಣಿಕ ಮಂತ್ರ:-

ಓಂ ಹ್ರೀಂ ನೀಲಾಂಜನಸಮಾಭಾಸಂ ರವಿಪುತ್ರಂ ಯಮಾಗ್ರಜಂ|

ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ||''

ಶನಿ ವೇದ ಮಂತ್ರ:-

ಓಂ ಶನ್ನೋದೇವೀರ್-ಭಿಷ್ಟಯ ಆಪೋ ಭವಂತು ಪೀತಯೇ ಶಂಯ್ಯೋರ್ಭಿಸ್ತ್ರವಂತುನಃ''

ಶನಿ ಗಾಯತ್ರಿ ಮಂತ್ರ:-

ಓಂ ಭಗಭವಾಯ ವಿದ್ಮಹೈಂ ಮೃತ್ಯುರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್|

ಓಂ ಶನ್ನೋದೇವೀರ್ಭೀಷ್ಟಯ ಆಪೋ ಭವಂತು ಪೀತಯೇ ಶಂಯೋರ್ಭಿಶ್ರವಂತು ನಃ|'', 

ಆರೋಗ್ಯಕ್ಕಾಗಿ ಶನಿ ಮಂತ್ರ:-

ಧ್ವಜಿನೀ ಧಾಮಿನೀ ಚೈವ ಕಂಕಾಲೀ ಕಲಹಪ್ರಿಹಾ|

ಕಂಕಟೀ ಕಲಹೀ ಚಾಊಥ್‌ ತುರಂಗಿ ಮಹಿಷಿ ಆಜಾ|

ಶನೈರ್ನಾಮನಿ ಪತ್ನಿನಾಮೇತಾನಿ ಸಂಜಪನ್ ಪುಮಾನ್|

ದುಃಖಾನಿ ನಶ್ಯೇನ್ನಿತ್ಯಂ ಸೌಭಾಗ್ಯಮೇಧತೇ ಸುಖಮಂ

ತಾಂತ್ರಿಕ ಶನಿ ಮಂತ್ರ:-

ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ|

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow