ಸತತ ಸೋಲಿನ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಶಾಕ್ ಕೊಟ್ಟ BCCI..! ಇನ್ಮುಂದೆ ಹೊಸ ರೂಲ್ಸ್

ಗಂಭೀರ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟಿ20 ಪಂದ್ಯಗಳಲ್ಲಿ ಮಿಂಚಿದರೂ, ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಮುಗ್ಗರಿಸಿದೆ. ಅದರಲ್ಲೂ ಹೀನಾಯ ಸೋಲುಗಳಿಗೆ ಕೊರೊಳೊಡ್ಡಿವೆ. ಗೌತಮ್ ಗಂಭೀರ್ ಕೋಚ್ ಆದ ಬಳಿಕ ಭಾರತ ತಂಡವು ಶ್ರೀಲಂಕಾ ವಿರುದ್ಧ ಸರಣಿ ಸೋತಿದೆ. ಅದು ಕೂಡ 27 ವರ್ಷಗಳ ಬಳಿಕ ಎಂಬುದು ಇಲ್ಲಿ ಉಲ್ಲೇಖಾರ್ಹ.. ಏಕದಿನ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾ 30 ವಿಕೆಟ್ ಕಳೆದುಕೊಂಡು 3 ಪಂದ್ಯಗಳ ಏಕದಿನ ಸರಣಿ ಸೋತ ಹೀನಾಯ ದಾಖಲೆ ಬರೆದಿದೆ.
ಆದ್ದರಿಂದ ತಂಡದಲ್ಲಿ ಕೆಲ ಬದಲಾವಣೆಗಳನ್ನು ತರಲು ಬಿಸಿಸಿಐ ಚಿಂತನೆ ನಡೆಸಿದ್ದು, ಆಟಗಾರರ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಮುಂದಾಗಿದೆ. ವಿಶೇಷವಾಗಿ ವಿದೇಶಿ ಸರಣಿಗಳಲ್ಲಿ ತಮ್ಮ ಕುಟುಂಬಸ್ಥರ ಜೊತೆ ಇರಲು ನೀಡುತ್ತಿದ್ದ ಅವಕಾಶಕ್ಕೆ ಕಡಿವಾಣ ಹಾಕಲು ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾದ ಪ್ರಸ್ತಾಪದ ಮಾಹಿತಿ ಪ್ರಕಾರ, ಮುಂಬರುವ ಸರಣಿಗಳ ವೇಳೆ ಟೀಮ್ ಇಂಡಿಯಾ ಆಟಗಾರರ ಪತ್ನಿಯರು ಇಡೀ ಸರಣಿಯಲ್ಲಿ ಜೊತೆಗಿರುವಂತಿಲ್ಲ. ಅಂದರೆ ಪತ್ನಿಯರು ಮತ್ತು ಕುಟುಂಬ ಸದಸ್ಯರು ಪ್ರವಾಸದ ಸಂಪೂರ್ಣ ಅವಧಿಯಲ್ಲಿ ತಂಡದೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ.
45 ದಿನಗಳ ಸರಣಿಯಾಗಿದ್ದರೆ ಎರಡು ವಾರಗಳ ಕಾಲ ಜೊತೆಯಾಗಿ ಉಳಿಯಬಹುದು. ಅಲ್ಲದೆ ಅಲ್ಪಾವಧಿಯ ಸರಣಿಗಳ ವೇಳೆ ಪತ್ನಿಯರು/ಕುಟುಂಬಸ್ಥರು ಜೊತೆಗಿರಬೇಕಾದ ಮಿತಿಯನ್ನು 7 ದಿನಗಳ ಕಾಲಕ್ಕೆ ಸೀಮಿತಗೊಳಿಸಲಾಗುತ್ತದೆ.
ಈ ಹಿಂದೆ ಇಂತಹದೊಂದು ನಿಯಮ ಜಾರಿಯಲ್ಲಿತ್ತು. ಆದರೆ ಕೊರೋನಾ ಸಂದರ್ಭದಲ್ಲಿ ಆಟಗಾರರು ಬಯೋಬಬಲ್ನಲ್ಲಿ ಹಾಯಾಗಿರುವಂತೆ ಮಾಡಲು ನಿಯಮಗಳನ್ನು ಸಡಿಲಗೊಳಿಸಲಾಯಿತು. ಇದೀಗ ಮತ್ತೆ ಹಳೆಯ ನಿಯಮಗಳನ್ನು ಜಾರಿಗೊಳಿಸಲು ಬಿಸಿಸಿಐ ಮುಂದಾಗಿದೆ.
ಹೀಗಾಗಿ ಮುಂಬರುವ ಭಾರತ ತಂಡದ ಸರಣಿ ಅಥವಾ ಟೂರ್ನಿಗಳ ವೇಳೆ ಟೀಮ್ ಇಂಡಿಯಾ ಆಟಗಾರರ ಪತ್ನಿಯರು ಸಂಪೂರ್ಣ ಅವಧಿವರೆಗೆ ಜೊತೆಗಿರುವಂತಿಲ್ಲ. ಇಲ್ಲಿ ಕನಿಷ್ಠ 7 ದಿನಗಳ ಕಾಲ ಹಾಗೂ ಗರಿಷ್ಠ 14 ದಿನಗಳ ಕಾಲ ಮಿತಿಯನ್ನು ನಿಗದಿ ಪಡಿಸಲು ನಿರ್ಧರಿಸಲಾಗಿದೆ.
ಒಂದೇ ಬಸ್ನಲ್ಲಿ ಎಲ್ಲರ ಪ್ರಯಾಣ:
ಟೀಮ್ ಇಂಡಿಯಾ ಆಟಗಾರರು ಒಂದೇ ಬಸ್ನಲ್ಲಿ ಪ್ರಯಾಣಿಸಬೇಕೆಂಬ ನಿಯಮವನ್ನು ಸಹ ಜಾರಿಗೊಳಿಸಲಾಗುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲ ಸ್ಟಾರ್ ಆಟಗಾರರಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿತ್ತು.
ನಿಮ್ಮ ಪ್ರತಿಕ್ರಿಯೆ ಏನು?






