ಸಾಲ ಬಾಧೆಯಿಂದ 4 ತಿಂಗಳ ಮಗುವಿಗೆ ವಿಷವಿಕ್ಕಿ ಕೊಂದು ದಂಪತಿ ಸೂಸೈಡ್!

ಆಗಸ್ಟ್ 27, 2025 - 22:01
 0  11
ಸಾಲ ಬಾಧೆಯಿಂದ 4 ತಿಂಗಳ ಮಗುವಿಗೆ ವಿಷವಿಕ್ಕಿ ಕೊಂದು ದಂಪತಿ ಸೂಸೈಡ್!

ಲಕ್ನೋ:- ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಸಾಲ ಬಾಧೆಯಿಂದ ಬಳಲುತ್ತಿದ್ದ ದಂಪತಿಯು ತಮ್ಮ 4 ತಿಂಗಳ ಮಗುವಿಗೆ ವಿಶಪ್ರಾಶನ ಮಾಡಿ ಕೊನೆಗೆ ತಾವೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ. 

ಕೈಮಗ್ಗ ಉದ್ಯಮಿ ಸಚಿನ್ ಗ್ರೋವರ್ (30) ಮತ್ತು ಅವರ ಪತ್ನಿ ಶಿವಾನಿ (28) ಸಾಲದ ಸುಳಿಯಲ್ಲಿ ಸಿಲುಕಿದ್ದರು. ಈ ದಂಪತಿಗೆ ನಾಲ್ಕು ತಿಂಗಳ ಗಂಡು ಮಗು ಫತೇಹ್ ಇದ್ದ. ಬುಧವಾರ ಬೆಳಗ್ಗೆ ಮೂವರ ಶವಗಳು ಪ್ರತ್ಯೇಕ ಕೋಣೆಗಳಲ್ಲಿ ಕಂಡುಬಂದಿವೆ. 

ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಅದರಲ್ಲಿ ಸಚಿನ್ ಸಾಲದ ಹೊರೆ ಮತ್ತು ಆದಾಯದ ಕೊರತೆಯಿಂದ ತೀವ್ರ ನೊಂದಿರುವುದಾಗಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ದಯವಿಟ್ಟು ನಮ್ಮ ಕಾರು ಮತ್ತು ಮನೆಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಡಿ. ಸಾಲ ಕೊಟ್ಟವರು ನೊಂದುಕೊಳ್ಳಬಾರದು ಎಂದು ಸಚಿನ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದಂಪತಿ ಮಂಗಳವಾರ ರಾತ್ರಿ ಸೀಲಿಂಗ್ ಫ್ಯಾನ್‌ಗಳಿಗೆ ನೇಣು ಹಾಕಿಕೊಂಡಿದ್ದರು. ಮಗುವಿನ ಶವ ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿದೆ. ದಂಪತಿ ಆತ್ಮಹತ್ಯೆಗೂ ಮುನ್ನ ತಮ್ಮ ಮಗನಿಗೆ ವಿಷಪ್ರಾಶನ ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow