ಸಿನಿಪ್ರೇಕ್ಷಕರಿಗೆ ಗುಡ್ ನ್ಯೂಸ್: 13 ವರ್ಷಗಳ ಬಳಿಕ ಟಾಲಿವುಡ್‌ಗೆ ಜೆನಿಲಿಯಾ ಡಿಸೋಜಾ ಎಂಟ್ರಿ!

ತೆಲುಗು ಸಿನಿಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, 13 ವರ್ಷಗಳ ಬಳಿಕ ಕನ್ನಡದ ‘ಸತ್ಯ ಇನ್ ಲವ್’ ನಟಿ ಟಾಲಿವುಡ್‌ಗೆ ಜೆನಿಲಿಯಾ ಡಿಸೋಜಾ ಎಂಟ್ರಿ ಕೊಟ್ಟಿದ್ದಾರೆ.
ತೆಲುಗಿನ ಸ್ಟಾರ್ ನಟನೊಬ್ಬನ ಸಿನಿಮಾದಲ್ಲಿ ಬಾಲಿವುಡ್ ನಟಿ ಜೆನಿಲಿಯಾ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಈ ಚಿತ್ರದಲ್ಲಿ ಅವರಿಗೆ ಪವರ್‌ಫುಲ್ ಪಾತ್ರವೇ ಸಿಕ್ಕಿದೆಯಂತೆ. ಯಾವ ಸ್ಟಾರ್ ನಟನ ಜೊತೆ ಜೆನಿಲಿಯಾ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ರಿವೀಲ್ ಮಾಡುವವರೆಗೂ ಕಾಯಬೇಕಿದೆ
ಜೆನಿಲಿಯಾಗೆ ತೆಲುಗು ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಸಿದ್ಧಾರ್ಥ್ ಜೊತೆ ‘ಬೊಮ್ಮರಿಲ್ಲು’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ತೆಲುಗಿನ ನಾ ಇಷ್ಟಂ, ಹ್ಯಾಪಿ, ಸೈ, ಕಿಂಗ್, ರೆಡಿ, ರಾಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಜೆನಿಲಿಯಾ ನಟಿಸಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






