ಹಿರಿಯ ನಟಿ ಜಯಮಾಲಾ ಮನೆಯಲ್ಲಿ ಸಂಭ್ರಮ: ಸಾಕಷ್ಟು ಸ್ಟಾರ್ ಗಳು ಭಾಗಿ!

ಫೆಬ್ರವರಿ 6, 2025 - 18:13
 0  2
ಹಿರಿಯ ನಟಿ ಜಯಮಾಲಾ ಮನೆಯಲ್ಲಿ ಸಂಭ್ರಮ: ಸಾಕಷ್ಟು ಸ್ಟಾರ್ ಗಳು ಭಾಗಿ!

ಕನ್ನಡ ಚಿತ್ರರಂಗದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಂದ್ ಕಡೆ ಡಾಲಿ ಹಸೆಮಣೆ ಏರೋಕೆ ರೆಡಿಯಾಗಿದ್ರೆ, ಇನ್ನೊಂದ್ ಕಡೆ ಜಯಮಾಲಾ ಪುತ್ರಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಸೌಂದರ್ಯ ಜಯಮಾಲಾ ಹಳದಿ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ನಟಿಯರು ಮಿಂಚಿದ್ದಾರೆ. ನಟಿಯ ಹಳದಿ ಶಾಸ್ತ್ರ ಸುಂದರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ನಟಿ ಜಯಮಾಲಾ ಅವರ ಏಕೈಕ ಪುತ್ರಿ ಸೌಂದರ್ಯ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ಜಯಮಾಲಾ ಮಗಳು ಸೌಂದರ್ಯ ಅವರ ಹಳದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ.

ಸೌಂದರ್ಯ ಜಯಮಾಲಾ ಅವರು ಎರಡು ವರ್ಷಗಳ ಕಾಲ ಅಭಿನಯಿಸಿ ಆ ನಂತರ ಸಿನಿಮಾ ರಂಗದಿಂದ ದೂರ ಉಳಿದುಕೊಂಡಿದ್ದರು. ಇದೀಗ ರುಷಬ್‌ ಕೆ ಎಂಬುವವರ ಜೊತೆ ಸೌಂದರ್ಯ ಮದುವೆ ನಡೆಯುತ್ತಿದೆ.

ನಟಿ ಜಯಮಾಲಾ ಮಗಳ ಮದುವೆಯು ಫೆಬ್ರವರಿ 7, 8ರಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಮದುವೆ ನಡೆಯಲಿದೆ. ಇನ್ನೂ, ಸೌಂದರ್ಯ ಹಳದಿ ಶಾಸ್ತ್ರಕ್ಕೆ ಸ್ಯಾಂಡಲ್ವುಡ್ ಹಿರಿಯ ನಟಿಯರು ಭಾಗಿಯಾಗಿದ್ದು ವಿಶೇಷವಾಗಿತ್ತು.

ಈಗಾಗಲೇ ಜಯಮಾಲಾ ಮಗಳ ಹಳದಿ ಶಾಸ್ತ್ರವು ಬೆಂಗಳೂರಿನ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆದಿದೆ. ಹಳದಿ ಶಾಸ್ತ್ರವನ್ನು ಈ ಅದ್ದೂರಿಯಾಗಿ ಮಾಡಲಾಗಿತ್ತು. ಎಲ್ಲೆಲ್ಲೂ ಹಳದಿ ಬಣ್ಣದ ಹೂಗಳಿಂದ ಸಿಂಗಾರ ಮಾಡಲಾಗಿತ್ತು.

ಇನ್ನು ನಟಿ ಶ್ರುತಿ, ಮಾಳವಿಕಾ ಅವಿನಾಶ್‌, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್‌, ಗಿರಿಜಾ ಲೋಕೇಶ್‌, ಹರ್ಷಿಕಾ ಪೂಣಚ್ಛ, ಅನು ಪ್ರಭಾಕರ್‌, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್‌, ಹೇಮಾ ಚೌಧರಿ, ಸುಧಾ ನರಸಿಂಹರಾಜು ಮುಂತಾದ ಹಿರಿಯ ನಟಿಯರು ಭಾಗವಹಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow