ಹೆಚ್ಚಾಯ್ತು ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್: ಕೆಜಿಎಫ್​ ದಾಖಲೆ ಪುಡಿಗಟ್ಟಿದ ರಿಷಬ್ ಶೆಟ್ಟಿ!

ಅಕ್ಟೋಬರ್ 8, 2025 - 20:02
 0  23
ಹೆಚ್ಚಾಯ್ತು ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್: ಕೆಜಿಎಫ್​ ದಾಖಲೆ ಪುಡಿಗಟ್ಟಿದ ರಿಷಬ್ ಶೆಟ್ಟಿ!

ರಿಷಭ್ ಶೆಟ್ಟಿ ಅವರ ಕಾಂತಾರ ಪ್ರೀಕ್ವೆಲ್ ಮೂವಿ ಥಿಯೇರ್​​ಗಳಲ್ಲಿ ಅಬ್ಬರಿಸುತ್ತಿದೆ. ಜನರನ್ನು ಸಿನಿಮಾ ಮಂದಿರಗಳತ್ತ ಸೆಳೆಯುತ್ತಿರುವ ಕಾಂತಾರ ಕಲೆಕ್ಷನ್​​ನಲ್ಲೂ ಹಿಂದೆ ಬಿದ್ದಿಲ್ಲ. ಹೌಸ್​ಫುಲ್​ ಶೋಗಳು ನಡೆಯುತ್ತಿರುವುದು ರಿಷಭ್​ ಶೆಟ್ಟಿ ಹಾಗೂ ನಿರ್ಮಾಪಕರಿಗೆ ಸಂತಸದ ಸುದ್ದಿಯಾಗಿದೆ.

ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿದ 2025ರ ಬಹುನಿರೀಕ್ಷಿತ ಚಿತ್ರ ಕಳೆದ ಗುರುವಾರ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿ, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೇವಲ 6 ದಿನಗಳಲ್ಲಿ ಭಾರತದಲ್ಲಿ ಬರೋಬ್ಬರಿ 290 ಕೋಟಿ ರೂ. ನೆಟ್​ ಕಲೆಕ್ಷನ್​ ಮಾಡಿದೆ.

ಕಳೆದ ದಿನ (ಆರನೇ ದಿನ) ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಬಿಗ್​​ ಬಜೆಟ್​ ಚಿತ್ರ 33.5 ಕೋಟಿ ರೂಪಾಯಿ (ಆರಂಭಿಕ ಅಂದಾಜು) ಕಲೆಕ್ಷನ್​ ಮಾಡಿದೆ. ಬಹುಭಾಷೆಗಳಲ್ಲಿ ತೆರೆಕಂಡಿರುವ ಈ ಚಿತ್ರ ಕನ್ನಡದಲ್ಲಿ 13 ಕೋಟಿ ರೂ., ತೆಲುಗಿನಲ್ಲಿ 4.75 ಕೋಟಿ ರೂ., ಹಿಂದಿಯಲ್ಲಿ 11 ಕೋಟಿ ರೂ., ತಮಿಳಿನಲ್ಲಿ 2.5 ಕೋಟಿ ರೂ., ಮಲಯಾಳಂನಲ್ಲಿ 2.25 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದೆ. ಈ ಅಂಕಿ ಅಂಶ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ವರದಿಯನ್ನಾಧರಿಸಿದೆ.

ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಶೆಟ್ರ ಸಿನಿಮಾ ಪ್ರಾಬಲ್ಯ ಸಾಧಿಸಿದ್ದು, ಆರಂಭಿಕ ವಾರಾಂತ್ಯದಲ್ಲಿ ಯಶ್ ಅವರ ಕೆಜಿಎಫ್: ಚಾಪ್ಟರ್​ 2 ಅನ್ನು ಹಿಂದಿಕ್ಕಿದೆ. ಕೆಜಿಎಫ್ 2 ಆರಂಭಿಕ ವಾರಾಂತ್ಯದಲ್ಲಿ ರಾಜ್ಯದಲ್ಲಿ ಸುಮಾರು 73.50 ಕೋಟಿ ರೂ. ಗಳಿಸಿದರೆ, ಕಾಂತಾರ: ಚಾಪ್ಟರ್​ 1 ಕೇವಲ 3 ದಿನಗಳಲ್ಲಿ 79 ಕೋಟಿ ರೂ. ಗಳಿಸುವ ಮೂಲಕ ಯಶ್​ ಸಿನಿಮಾ ದಾಖಲೆಯನ್ನು ಮೀರಿಸಿದೆ. ಸದ್ಯದ ಸಿನಿಮಾ ಕ್ರೇಜ್​​​​ ಗಮನಿಸಿದರೆ, ಕಾಂತಾರ ಚಾಪ್ಟರ್ 1 ಕರ್ನಾಟಕವೊಂದರಲ್ಲೇ 200 ಕೋಟಿ ರೂ.ಗಳ ಕ್ಲಬ್‌ ಪ್ರವೇಶಿಸುವ ಹಾದಿಯಲ್ಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow