ಹೊಸ ಬಿಸಿನೆಸ್ ಆರಂಭಿಸಿದ ಕಾರ್ತಿಕ್ ಮಹೇಶ್: ಅಮ್ಮನ ಜೊತೆ ಸೇರಿ ಮಾಡ್ತಿರುವ ಉದ್ಯಮ ಯಾವುದು?

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ವಿನ್ನರ್ ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು, ಬಿಗ್ಬಾಸ್ ಮೂಲಕ ಫೇಮಸ್ ಆಗಿದ್ದ ಕಾರ್ತಿಕ್ ಮಹೇಶ್ ಅವರ ಕೈಯಲ್ಲಿ ರಾಮರಸ ಹಾಗೂ ರಿಚಿ ರಿಚ್ ಹೆಸರಿನ ಎರಡು ಸಿನಿಮಾಗಳಿವೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತರಾಗಿ ಹೊರಹೊಮ್ಮಿದವರು ನಟ ಕಾರ್ತಿಕ್ ಮಹೇಶ್. 2024ರಲ್ಲಿ ಸೀಸನ್ 10ರ ವಿನ್ನರ್ ಆಗಿದ್ದ ಇದೇ ಕಾರ್ತಿಕ್, ಇದೀಗ ಬಿಗ್ ಬಾಸ್ ಗೆದ್ದು ವರ್ಷ ಕಳೆಯುವಷ್ಟರಲ್ಲಿ ಹೊಸ ಸಾಹಸಕ್ಕೆ ಇಳಿದಿದ್ದಾರೆ. ಅಮ್ಮನ ಆಶೀರ್ವಾದ ಪಡೆದು ಹೊಸ ಉದ್ಯಮ ಆರಂಭಿಸಿದ್ದಾರೆ
ಹೌದು, ಕಾರ್ತಿಕ್ ಮಹೇಶ್ ಅವರು ಸೋಡಾ ಬಿಸ್ನೆಸ್ ಆರಂಭಿಸಲಿದ್ದಾರೆ. ಅಮ್ಮನ ಜೊತೆ ಸೇರಿ ಗೋಲಿ ಸೋಡಾ ಆರಂಭಿಸಿದ್ದಾರೆ. ವಿವಿಧ ಫ್ಲೇವರ್ನಲ್ಲಿ ಇದು ಲಭ್ಯವಿರಲಿದೆ ಎನ್ನಲಾಗಿದೆ. ಶೀಘ್ರವೇ ಇದು ಮಾರುಕಟ್ಟೆಗೆ ಬರಲಿದೆಯಂತೆ.
ಬಿಗ್ ಬಾಸ್ ಗೆದ್ದ ಹಣವನ್ನು ಅನೇಕರು ನಾನಾ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ. ಅಮ್ಮನಿಗೋಸ್ಕರ ಮನೆ ಕಟ್ಟಬೇಕು ಎನ್ನುವ ಕನಸು ಕಾರ್ತಿಕ್ ಮಹೇಶ್ ಅವರದ್ದಾಗಿತ್ತು. ಈಗ ಅವರು ಉದ್ಯಮಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಗೆದ್ದ ಬಳಿಕ ಕಾರ್ತಿಕ್ ಮಹೇಶ್ ಖ್ಯಾತಿ ಹೆಚ್ಚಾಯಿತು. ಅವರು ‘ರಾಮರಸ’ ಹೆಸರಿನ ಸಿನಿಮಾ ಘೋಷಣೆ ಮಾಡಿದರು. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಡಬ್ಬಿಂಗ್ ಕೆಲಸಗಳೂ ಆಗಿವೆ.
ಇತ್ತೀಚೆಗಷ್ಟೇ ‘ರಿಚಿ ರಿಚ್’ ಹೆಸರಿನ ಸಿನಿಮಾನ ಘೋಷಣೆ ಮಾಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ. ಅರವಿಂದ್ ವೆಂಕಟೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






