"ಹೋಗಿ ಬಾ ಮಗಳೇ": ಬಿಗ್ ಬಾಸ್ ನಿಂದ ಐಶ್ವರ್ಯಾಗೆ ಭಾವುಕ ವಿಧಾಯ!

ಬಿಗ್ ಬಾಸ್ ಮನೆಯಲ್ಲಿ ಫಿನಾಲೆಗೆ ಕೆಲವೇ ದಿನ ಇರುವ ಹಿನ್ನೆಲೆ ಒಬ್ಬೊಬ್ಬರೇ ಮನೆಯಿಂದ ಖಾಲಿ ಆಗುತ್ತಿದ್ದಾರೆ. ಈ ವಾರ ಮನೆಯಿಂದ ಐಶ್ವರ್ಯಾ ಅವರು ಔಟ್ ಆಗಿದ್ದಾರೆ. ಇದೀಗ ಬಿಗ್ ಬಾಸ್ ದಿನ ಕಳೆದಂತೆ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಐಶ್ವರ್ಯಾಗೆ ಬಿಗ್ ಬಾಸ್ ಭಾವುಕ ವಿದಾಯ ಹೇಳಿದ್ದಾರೆ.
ಈ ವಾರ ಡೇಂಜರ್ ಝೋನ್ಲ್ಲಿ ಐಶ್ವರ್ಯಾ ಮತ್ತು ಮೋಕ್ಷಿತಾ ಇದ್ದರು. ಅಂತಿಮವಾಗಿ ಐಶ್ವರ್ಯಾ ಎಮಿಲಿನೇಟ್ ಆದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬರುವುದಕ್ಕೂ ಮುನ್ನ ಐಶ್ವರ್ಯಾಗೆ ಒಂದು ಪತ್ರ ಬಂತು. ಆ ಪತ್ರ ಓದುತ್ತಿದ್ದಂತೆಯೇ ಅವರು ಕಣ್ಣೀರು ಹಾಕಲು ಆರಂಭಿಸಿದರು. ‘ಪತ್ರದ ಮೂಲಕ ಸುಂದರವಾಗಿ ವಿದಾಯ ಹೇಳಿದ್ದಕ್ಕೆ ಧನ್ಯವಾದಗಳು. ಅಂದು ವಾಯ್ಸ್ ನೋಟ್ ಕಳಿಸಿದ್ರಿ. ನಾನು ಮುದುಕಿ ಆದರೂ ಇವರೆಲ್ಲ ನನ್ನ ಕುಟುಂಬದವರಾಗಿ ಇರುತ್ತಾರೆ. 13 ವಾರ ನಾನು ಘಟಾನುಘಟಿಗಳ ಜೊತೆಗೆ ಇದ್ದು ಫೈಟ್ ಮಾಡಿದ್ದೇನೆ ಎಂಬುದಕ್ಕೆ ನನಗೆ ಹೆಮ್ಮೆ ಇದೆ. ಲವ್ ಯೂ ಬಿಗ್ ಬಾಸ್. ಮೋಕ್ಷಿತಾ ಚೆನ್ನಾಗಿ ಆಡು. ನಿನ್ನನ್ನು ನಾನು ಫೈನಲ್ನಲ್ಲಿ ನೋಡಬೇಕು’ ಎಂದು ಹೇಳುವ ಮೂಲಕ ಐಶ್ವರ್ಯಾ ಅವರು ಎಲ್ಲರಿಗೂ ವಿದಾಯ ಹೇಳಿದರು.
ವೇದಿಕೆಗೆ ಬಂದು ಸುದೀಪ್ ಜೊತೆ ಐಶ್ವರ್ಯಾ ಮಾತನಾಡಿದರು. ‘ಆರಂಭದಲ್ಲಿ ಇದ್ದ ಎನರ್ಜಿ ಕಡಿಮೆ ಆಯಿತು. ಅದೇ ತಪ್ಪಾಯಿತು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದು ನನ್ನ ಮನೆಯೇ ಅನಿಸಿತು. ನನಗೆ ಒಂದು ಫ್ಯಾಮಿಲಿ ಸಿಕ್ಕಿದೆ. 3 ತಿಂಗಳು ನಾನು ಬಿಗ್ ಬಾಸ್ ಮನೆಯಲ್ಲಿ ಬದುಕಿದ್ದಕ್ಕೆ ನನಗೆ ಸಾರ್ಥಕ ಎನಿಸಿದೆ. ಬಿಗ್ ಬಾಸ್ ಮನೆ ನನಗೆ ದೇವಸ್ಥಾನ. ಅದರಲ್ಲಿ ಸುದೀಪ್ ಅವರು ದೇವರ ರೀತಿ. ನನ್ನನ್ನು ಇಷ್ಟಪಡುವ ಕರ್ನಾಟಕದ ಜನತೆಗೆ ಧನ್ಯವಾದ. ಯಾರೂ ಇಲ್ಲ ಎಂಬ ಫೀಲಿಂಗ್ ಬಂದಿಲ್ಲ. ಇನ್ಮುಂದೆ ಬರುವುದೂ ಇಲ್ಲ’ ಎಂದು ಐಶ್ವರ್ಯಾ ಅವರು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






