10 ಕೋಟಿ ಜಮೀನಿಗೆ ಕೇವಲ 10 ಲಕ್ಷ ಕೊಟ್ರಾ “ಕೈ” ಮುಖಂಡ! ಡೆತ್‌ನೋಟ್‌ ಬರೆದಿಟ್ಟು ಮುಖ್ಯ ಶಿಕ್ಷಕ ಆತ್ಮಹತ್ಯೆ!

ಡಿಸೆಂಬರ್ 27, 2024 - 13:55
 0  13
10 ಕೋಟಿ ಜಮೀನಿಗೆ ಕೇವಲ 10 ಲಕ್ಷ ಕೊಟ್ರಾ “ಕೈ” ಮುಖಂಡ! ಡೆತ್‌ನೋಟ್‌ ಬರೆದಿಟ್ಟು ಮುಖ್ಯ ಶಿಕ್ಷಕ ಆತ್ಮಹತ್ಯೆ!

ಬೆಂಗಳೂರು: ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಂತೆ ಇದೀಗ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಮೀನು ವಿಚಾರಕ್ಕೆ ಡೆತ್‌ನೋಟ್‌ ಬರೆದಿಟ್ಟು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನರಸಿಂಹ ಮೂರ್ತಿ (59) ಆತ್ಮಹತ್ಯೆ ಮಾಡಿಕೊಂಡ ಮುಖ್ಯ ಶಿಕ್ಷಕ. ಹೊಸಕೋಟೆ ಜಡಗನಹಳ್ಳಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜನವರಿ‌ 15 ಕ್ಕೆ ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು.

10 ಕೋಟಿ ಜಾಗದ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಂಗನಗರದಲ್ಲಿ‌ 25 ಗುಂಟೆ ಜಮೀನು ಹೊಂದಿದ್ದರು. ಕಾಂಗ್ರೆಸ್ ಮುಖಂಡ ಸತೀಶ್ ಎಂಬವರು ಜಮೀನು ಖರೀದಿಸೋದಾಗಿ ಅಗ್ರಿಮೆಂಟ್ ಹಾಕಿಸಿಕೊಂಡಿದ್ದರು. 10 ಕೋಟಿ ಜಮೀನಿಗೆ 10 ಲಕ್ಷ ಕೊಟ್ಟು ಅಗ್ರಿಮೆಂಟ್ ಆಗಿತ್ತು. ಉಳಿದ ಹಣ ಕೊಡದೆ ಜಮೀನು ಲಪಟಾಯಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ಹಣ ಕೇಳಲು ಹೋದಾಗ ಧಮ್ಕಿ ಹಾಕಿದ್ದರು. ಇದರಿಂದ ಮನನೊಂದು ನರಸಿಂಹ ಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow