16 ವರ್ಷದ ಬಾಲಕನನ್ನೇ ವರಿಸಿದ ಶಿಕ್ಷಕಿ: 25 ವರ್ಷದ ಟೀಚರ್ ವಿರುದ್ಧ ದೂರು ದಾಖಲು!

ಡಿಸೆಂಬರ್ 4, 2024 - 22:00
 0  8
16 ವರ್ಷದ ಬಾಲಕನನ್ನೇ ವರಿಸಿದ ಶಿಕ್ಷಕಿ: 25 ವರ್ಷದ ಟೀಚರ್ ವಿರುದ್ಧ ದೂರು ದಾಖಲು!

ಉತ್ತರ ಪ್ರದೇಶ:- 16 ವರ್ಷದ ಬಾಲಕನನ್ನೇ 25 ವರ್ಷದ ಶಿಕ್ಷಕಿ ವರಿಸಿ ಮದುವೆ ಆಗಿರುವ ಘಟನೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ ಜರುಗಿದೆ. ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವತಿ ಕೆಲವು ದಿನಗಳ ಹಿಂದೆ ಮೀರತ್‌ನ 16 ವರ್ಷದ ಬಾಲಕನನ್ನು ಸಾಮಾಜಿಕ ಮಾಧ್ಯಮದ ಮೂಲಕ ಭೇಟಿಯಾಗಿದ್ದಳು. 

ಬಳಿಕ ಇವರಿಬ್ಬರ ಪರಿಚಯ ಪ್ರೀತಿಯಾಗಿ ತಿರುಗಿದೆ. ಇತ್ತೀಚೆಗೆ ಶಿಕ್ಷಕಿ ಕಾರಿನಲ್ಲಿ ಮೀರತ್‌ಗೆ ಹೋಗಿ, ಬಾಲಕನ್ನು ಕಾರಿನಲ್ಲಿ ಗಾಜಿಯಾಬಾದ್‌ಗೆ ಕರೆದುಕೊಂಡು ಹೋಗಿದ್ದರು. ಗಾಜಿಯಾಬಾದ್‌ನಲ್ಲಿಯೇ ಬಾಲಕ ಮೇಜರ್ ಎಂಬಂತೆ ನಕಲಿ ದಾಖಲೆ ಸೃಷ್ಟಿಸಿ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾಳೆ. ತಮ್ಮ ಮಗನ ಮದುವೆಯ ಬಗ್ಗೆ ತಿಳಿದ ಹುಡುಗನ ಪೋಷಕರು ಆಘಾತಕ್ಕೊಳಗಾಗಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕಿ ತಮ್ಮ ಮಗನಿಗೆ ಹೆದರಿಸಿ ಮದುವೆಯಾಗಿದ್ದಾರೆ ಮತ್ತು ಅಪ್ರಾಪ್ತನಾಗಿದ್ದರೂ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬಾಲಕನ ಒಪ್ಪಿಗೆಯೊಂದಿಗೆ ಈ ಮದುವೆ ನಡೆದಿದ್ದರೂ, ಅದಕ್ಕೆ ಕಾನೂನು ಮಾನ್ಯತೆ ಇಲ್ಲ. ಭಾರತೀಯ ಕಾನೂನಿನ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಂದಿಗೆ ಮದುವೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow