ಶುರುವಾಯ್ತು ಕಿಚ್ಚ-ದಚ್ಚು ಫ್ಯಾನ್ಸ್ ವಾರ್: ಬಾಸಿಸಂ ಕಾಲ ಮುಗಿತು… ಮ್ಯಾಕ್ಸ್ ಮ್ಯಾಕ್ಸಿಸಂ ಅಂದಿದ್ದೇಕೆ?

ಡಿಸೆಂಬರ್ 27, 2024 - 18:53
 0  8
ಶುರುವಾಯ್ತು ಕಿಚ್ಚ-ದಚ್ಚು ಫ್ಯಾನ್ಸ್ ವಾರ್: ಬಾಸಿಸಂ ಕಾಲ ಮುಗಿತು… ಮ್ಯಾಕ್ಸ್ ಮ್ಯಾಕ್ಸಿಸಂ ಅಂದಿದ್ದೇಕೆ?

ರಾಜ್ಯಾದ್ಯಂತ ನಟ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌ ಸಿನಿಮಾ ಡಿ. 25 ಕ್ರಿಸ್ ಮಸ್ ರಂದು ಬಿಡುಗಡೆ ಆಗಿ, ಮೆಚ್ಚುಗೆ ಪಡೆದುಕೊಳ್ಳುತ್ತಿದೆ.  ಈ ನಡುವೆ ಕಿಚ್ಚನ ಆಪ್ತ ಬಳಗ ಕೇಕ್‌ ಕತ್ತರಿಸಿ ಸಂಭ್ರಮಿಸಿದೆ. ಆ ಕೇಕ್‌ ಫೋಟೋ ಇದೀಗ ವೈರಲ್‌ ಆಗಿದ್ದು, ಕೇಕ್‌ ಮೇಲೆ ಬಾಸಿಸಂ ಕಾಲ ಮುಗೀತು, ಮ್ಯಾಕ್ಸಿಮಮ್‌ ಮಾಸ್‌ ಕಾಲ ಶುರುವಾಯ್ತು ಎಂದು ಬರೆದಿದೆ. ಈ ಮೂಲಕ ದರ್ಶನ್‌ ಹೆಸರು ಮುನ್ನೆಲೆಗೆ ಬಂದಿದೆ. 

ಕಿಚ್ಚ ಸುದೀಪ್ ಮನೆಯಲ್ಲಿ ನಡೆದ ಮ್ಯಾಕ್ಸ್‌ ಚಿತ್ರತಂಡದ ಸೆಲೆಬ್ರೇಷನ್‌ ಇದೀಗ ಒಂದು ವಿವಾದ ಹುಟ್ಟು ಹಾಕಿದೆ. ಅಷ್ಟೇ ಅಲ್ಲದೇ ಕಿಚ್ಚ ಹಾಗೂ ದಚ್ಚು ಅಭಿಮಾನಿಗಳ ಫ್ಯಾನ್ಸ್ ವಾರ್ ಗೂ ಕಾರಣವಾಗಿದೆ. 

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಡುತ್ತಿದೆ. ಮ್ಯಾಕ್ಸ್ ಮ್ಯಾಗ್ಸಿಮಮ್‌ ಸಕ್ಸಸ್ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದಾರೆ. ಸುದೀಪ್ ಮನೆಯಲ್ಲಿ ಮ್ಯಾಕ್ಸ್ ಟೀಂಗೆ ಔತಣಕೂಟ ಏರ್ಪಡಿಸಿದ್ದು, ಸುದೀಪ್ ಆತ್ಮೀಯರು ಕೇಕ್ ಕಟ್ ಮಾಡಿ ಭರ್ಜರಿ ಸೆಲಬ್ರೇಟ್ ಮಾಡಿದ್ದಾರೆ. 

ಕಿಚ್ಚ ಸುದೀಪ್‌ ಮ್ಯಾಕ್ಸ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಡೆದ ಸೆಲೆಬ್ರೇಷನ್ ಈಗ ವಿವಾದಕ್ಕೆ ಕಾರಣವಾಗಿದೆ. ಮ್ಯಾಕ್ಸ್‌ ಚಿತ್ರತಂಡದ ಸಂಭ್ರಮದಲ್ಲಿ ಪರೋಕ್ಷವಾಗಿ ದರ್ಶನ್‌ಗೆ ಟಾಂಗ್ ಕೊಡಲಾಗುತ್ತಿದೆ ಅನ್ನೋ ಚರ್ಚೆ ಶುರುವಾಗಿದೆ.

ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟ ಮ್ಯಾಕ್ಸ್‌ ಚಿತ್ರತಂಡ ಸೆಲೆಬ್ರೇಷನ್‌ಗಾಗಿ ಕೇಕ್ ಕಟ್ ಮಾಡಿತ್ತು. ಈ ವೇಳೆ ಕೇಕ್ ಮೇಲೆ ಒಂದು ಸಾಲು ಬರೆಯಲಾಗಿದ್ದು, ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಬಾಸಿಸಂ ಕಾಲ ಮುಗಿತು… ಮ್ಯಾಕ್ಸ್ ಮ್ಯಾಕ್ಸಿಸಂ ಎಂದು ಬರೆಸಿ ಮ್ಯಾಕ್ಸ್‌ ಚಿತ್ರ ತಂಡ ಸಂಭ್ರಮಿಸಿತ್ತು. ಇದನ್ನು ನೋಡಿದ ಫ್ಯಾನ್ಸ್ ಬಾಸಿಸಂ ಕಾಲ ಮುಗಿತು ಅನ್ನೋದನ್ನ ನಟ ದರ್ಶನ್‌ಗೆ ಉಲ್ಲೇಖಿಸಲಾಗಿದೆ ಎಂದು ಟೀಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ಹೀಗೆ ಬರೆಸಿ ಟಾಂಗ್ ಕೊಡಲಾಗಿದೆ ಎನ್ನುತ್ತಿದ್ದಾರೆ.

ಈ ಬಾಸಿಸಂ ವಿವಾದ ಭುಗಿಲೇಳುತ್ತಿದ್ದಂತೆ ನಟ ಪ್ರದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಬಾಸಿಸಂ ಕಾಲ‌ ಮುಗಿತು ಅನ್ನೋ ಪದ ಕೇಕ್ ಮೇಲೆ ಬರೆಸಿದ್ದು ನಾನೇ. ಆದರೆ ಯಾವ ನಟನಿಗೂ ಟಾಂಗ್ ಕೊಟ್ಟಿದ್ದಲ್ಲ. ಇದು ಮ್ಯಾಕ್ಸ್ ಸಿನಿಮಾದ ಹಾಡಿನ ಸಾಲು. ಬಾಸ್ ಅನ್ನೋದು ಯಾವೊಬ್ಬ ನಟನಿಗೆ ಮೀಸಲಾಗಿಲ್ಲ ಎಂದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow