ನಬಾರ್ಡ್‌ನಿಂದ ಸ್ಪೆಷಲಿಸ್ಟ್‌ ಹುದ್ದೆಗಳ ನೇಮಕ: ಆಸಕ್ತ ಪದವೀಧರರು ಇಂದೇ ಅಪ್ಲೈ ಮಾಡಿ!

ಡಿಸೆಂಬರ್ 28, 2024 - 08:06
 0  9
ನಬಾರ್ಡ್‌ನಿಂದ ಸ್ಪೆಷಲಿಸ್ಟ್‌ ಹುದ್ದೆಗಳ ನೇಮಕ: ಆಸಕ್ತ ಪದವೀಧರರು ಇಂದೇ ಅಪ್ಲೈ ಮಾಡಿ!

ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣವನ್ನು ವಿವಿಧ ವಿಷಯಗಳಲ್ಲಿ ಪಾಸ್‌ ಮಾಡಿದ್ದು, ಸರ್ಕಾರಿ ಉದ್ಯೋಗ ಬೇಕು, ಅಥವಾ ಸರ್ಕಾರಿ ಉದ್ಯೋಗದ ತರವೇ ಬ್ಯಾಂಕ್‌ ಉದ್ಯೋಗ ಆದರೂ ಪರವಾಗಿಲ್ಲ ಎನ್ನುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌.

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

10 ಸ್ಪೆಷಲಿಸ್ಟ್‌ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕಟಣೆ ಬಿಡುಗಡೆ ಮಾಡಿದ್ದು, ತಾಂತ್ರಿಕ, ತಾಂತ್ರಿಕೇತರ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆ ಹೆಸರು    ಹುದ್ದೆಗಳ ಸಂಖ್ಯೆ
ಇಟಿಎಲ್‌ ಡೆವಲಪರ್    1
ಡಾಟಾ ಅನಾಲಿಸ್ಟ್‌    2
ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್‌    1
ಬ್ಯುಸಿನೆಸ್ ಅನಾಲಿಸ್ಟ್    1
ಯುಐ / ಯುಎಕ್ಸ್‌ ಡೆವಲಪರ್    1
ಸ್ಪೆಷಲಿಸ್ಟ್‌ ಡಾಟಾ ಮ್ಯಾನೇಜ್ಮೆಂಟ್    1
ಪ್ರಾಜೆಕ್ಟ್‌ ಮ್ಯಾನೇಜರ್ - ಅಪ್ಲಿಕೇಶನ್ ಮ್ಯಾನೇಜ್ಮೆಂಟ್    1
ಸೀನಿಯರ್ ಅನಾಲಿಸ್ಟ್‌ - ನೆಟ್‌ವರ್ಕ್‌/ಎಸ್‌ಡಿಡಬ್ಲ್ಯೂಎಎನ್‌ ಆಪರೇಷನ್ಸ್‌    1
ಸೀನಿಯರ್ ಅನಾಲಿಸ್ಟ್‌ - ಸೈಬರ್ ಸೆಕ್ಯೂರಿಟಿ ಆಪರೇಷನ್ಸ್

ಶೈಕ್ಷಣಿಕ ವಿದ್ಯಾರ್ಹತೆ
ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಯಾವುದೇ ಪದವಿ / ಬಿಇ / ಬಿ.ಟೆಕ್ / ಎಂ.ಟೆಕ್ / ಎಂಸಿಎ / ಎಂಎಸ್‌ಡಬ್ಲ್ಯೂ ಅನ್ನು ಹುದ್ದೆಗಳಿಗೆ ಅನುಗುಣವಾಗಿ ಪಡೆದಿರಬೇಕು.

ವಯಸ್ಸಿನ ಅರ್ಹತೆಗಳು
ಕನಿಷ್ಠ 24 ವರ್ಷ ಆಗಿರಬೇಕು, ಗರಿಷ್ಠ 55 ವರ್ಷ ವಯಸ್ಸು ಮೀರಿರಬಾರದು.

ಪ್ರಮುಖ ದಿನಾಂಕಗಳು
ನೋಟಿಫಿಕೇಶನ್‌ ಬಿಡುಗಡೆ ದಿನಾಂಕ: 21-12-2024
ಆನ್‌ಲೈನ್‌ ಅಪ್ಲಿಕೇಶನ್ ಸ್ವೀಕಾರ ಆರಂಭಿಕ ದಿನಾಂಕ: 21-12-2024
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ: 05-01-2025
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 05-01-2025

ಅಪ್ಲಿಕೇಶನ್ ಶುಲ್ಕ ವಿವರ
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.150.
ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ ರೂ.850.
ಅಪ್ಲಿಕೇಶನ್‌ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕು.

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ನಬಾರ್ಡ್‌ನ ವಿವಿಧ ಶಾಖೆಗಳಲ್ಲಿ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow