2 ವರ್ಷದ ಹಿಂದೆಯೇ ತಿಮರೋಡಿ ಭೇಟಿಯಾಗಿದ್ದ ಚಿನ್ನಯ್ಯ! ವಿಡಿಯೋ ರಿಲೀಸ್

ಸೆಪ್ಟೆಂಬರ್ 20, 2025 - 11:10
 0  15
2 ವರ್ಷದ ಹಿಂದೆಯೇ ತಿಮರೋಡಿ ಭೇಟಿಯಾಗಿದ್ದ ಚಿನ್ನಯ್ಯ! ವಿಡಿಯೋ ರಿಲೀಸ್

ಧರ್ಮಸ್ಥಳ: ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಸ್ಫೋಟಕ ತಿರುವು ಪಡೆಯುತ್ತಿದೆ. ಈಗ ಮಾಸ್ಕ್ ಮ್ಯಾನ್ ಚಿನ್ನಯ್ಯ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರಿಬ್ಬರ ನಡುವಿನ ಭೇಟಿಯ ವಿಡಿಯೋ ಬಹಿರಂಗವಾಗಿದೆ.  

ಈ ಭೇಟಿ ಎರಡು ವರ್ಷಗಳ ಹಿಂದೆ ತಿಮರೋಡಿ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಚಿನ್ನಯ್ಯ ಹೆಣಗಳನ್ನು ಹೇಗೆ ಹೂಳುತ್ತಿದ್ದನೆಂಬುದರ ಬಗ್ಗೆ ಬಾಯ್ಬಿಟ್ಟಿದ್ದಾನೆ. “ನೇತ್ರಾವತಿ ಸ್ನಾನಘಟ್ಟ ಸರ್ಕಾರಿ ಜಾಗದಲ್ಲಿ ಗುಂಡಿ ತೆಗೆದು ಶವಗಳನ್ನು ಹೂಳುತ್ತಿದ್ದೆ. ನೇತ್ರಾವತಿ ಸ್ನಾನಘಟ್ಟ ಸರ್ಕಾರಿ ಜಾಗ ಎಂದವರಿಗೆ ರಕ್ತ ಬರೋ ಹಾಗೆ ನನ್ನ ಹತ್ತಿರ ಹೊಡೆಸುತ್ತಿದ್ದರು. .

ಒಂದು ಶವವನ್ನು ಹೂಳುವಾಗ ಡಾಕ್ಟರ್ ಬರದೇ, ಕಂಪೌಂಡರ್‌ನೇ ಪೋಸ್ಟ್ ಮಾರ್ಟಮ್ ಮಾಡಿದ್ದ” ಎಂದು ಹೇಳಿಕೊಂಡಿದ್ದಾನೆ ಎನ್ನುವುದು ತಿಳಿದುಬಂದಿದೆ.  ಈ ವಿಡಿಯೋ ಬಹಿರಂಗವಾದ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದ್ದು, ತನಿಖಾ ಸಂಸ್ಥೆಗಳು ಹೆಚ್ಚಿನ ಸುಳಿವುಗಳನ್ನು ಪರಿಶೀಲಿಸುತ್ತಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow