38 ವರ್ಷದ ಮಹಿಳೆ ನಾಪತ್ತೆ ಕೇಸ್: ಕೋಲಾರದಲ್ಲಿ ಹೆಣವಾಗಿ ಪತ್ತೆ!

ನವೆಂಬರ್ 6, 2024 - 21:03
 0  11
38 ವರ್ಷದ ಮಹಿಳೆ ನಾಪತ್ತೆ ಕೇಸ್: ಕೋಲಾರದಲ್ಲಿ ಹೆಣವಾಗಿ ಪತ್ತೆ!

ಕೋಲಾರ:- 38 ವರ್ಷದ ಮಹಿಳೆ ನಾಪತ್ತೆ ಕೇಸ್ ಗೆ ಸಂಬಧಪಟ್ಟಂತೆ ತನಿಖೆ ಚುರುಕು ಮಾಡಿರುವ ಪೊಲೀಸರು, ಕೋಲಾರದಲ್ಲಿ  ಹೆಣವಾಗಿ ಪತ್ತೆ ಆಗಿದ್ದಾರೆ. 

ಶಾರದಮ್ಮ ಮೃತ ಮಹಿಳೆ. ಈಕೆಯ ಮೃತದೇಹ ಮುಳಬಾಗಿಲು ತಾಲೂಕಿನ ಅಗರ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಅಗರ ಗ್ರಾಮದ ವೆಂಕಟರಾಮ್ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆ ಆತನನ್ನು ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow