6 ಮಕ್ಕಳಿದ್ರೂ ಭಿಕ್ಷುಕನ ಮೇಲೆ ಪ್ರೇಮಾಂಕುರ: 6 ಮಕ್ಕಳು, ಪತಿಯ ಬಿಟ್ಟು ಭಿಕ್ಷುಕನೊಂದಿಗೆ ಮಹಿಳೆ ಪರಾರಿ!

ಜನವರಿ 8, 2025 - 22:01
 0  12
6 ಮಕ್ಕಳಿದ್ರೂ ಭಿಕ್ಷುಕನ ಮೇಲೆ ಪ್ರೇಮಾಂಕುರ: 6 ಮಕ್ಕಳು, ಪತಿಯ ಬಿಟ್ಟು ಭಿಕ್ಷುಕನೊಂದಿಗೆ ಮಹಿಳೆ ಪರಾರಿ!

ಮದುವೆಯಾದ ನಂತರವೂ ಪ್ರಿಯತಮನ ಜೊತೆ ಓಡಿ ಹೋಗುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಹೆಂಡತಿ ಅಥವಾ ಗಂಡ ಪ್ರೇಯಸಿ ಅಥವಾ ಪ್ರಿಯಕರನ ಜೊತೆ ಓಡಿ ಹೋಗುವ ಸುದ್ದಿ ಹೊಸದಲ್ಲ. ಆದರೆ ಆಕೆ 6 ಮಕ್ಕಳ ತಾಯಿ.. ಜೊತೆಗೆ ಪ್ರಾಣಕ್ಕೂ ಹೆಚ್ಚು ಪ್ರೀತಿಸೋ ಗಂಡ. ಆದ್ರೆ, ಆಕೆಗೆ ಅದೇನ್ ಕೊರತೆ ಆಯ್ತೋ ಏನೋ.. ತನ್ನ ಮಕ್ಕಳು-ಗಂಡನನ್ನ ಬಿಟ್ಟು ಮತ್ತೊಬ್ಬನ ಜೊತೆ ಪರಾರಿಯಾಗಿದ್ದಾಳೆ! 

ಹೌದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡದಿದೆ. ರಾಜು ಎಂಬಾತನ ಹೆಂಡತಿ ರಾಜೇಶ್ವರಿ (36) 6 ಮಕ್ಕಳ ತಾಯಿ ಭಿಕ್ಷುಕನೊಂದಿಗೆ ಓಡಿ ಹೋಗಿದ್ದಾಳೆ. ರಾಜು ಅವರ ಮನೆಗೆ ಪ್ರತಿನಿತ್ಯ ಭೇಟಿ ನೀಡುತ್ತಿದ್ದ ಭಿಕ್ಷುಕ ನನ್ಹೆ ಪಂಡಿತ್ ತಾಳೆಗರಿಗಳನ್ನು ಓದಲು ಕಲಿತಿದ್ದನು. ಆರಂಭದಲ್ಲಿ ಆಗಾಗ್ಗೆ ಮನೆಗೆ ಭೇಟಿ ನೀಡುತ್ತಿದ್ದನು.

 ನಂತರ ಇಬ್ಬರ ನಡುವೆ ಸಂವಹನ ಉತ್ತಮವಾಗಿಯೇ ಏರ್ಪಟ್ಟಿದ್ದರಿಂದ ಪ್ರತಿನಿತ್ಯ ಮನೆಯ ಬಳಿ ಬರಲು ಆರಂಭಿಸಿದ್ದಾನೆ. ಆಗ ರಾಜೇಶ್ವರಿ ಹಾಗೂ ಭಿಕ್ಷುಕನ ನಡುವಿನ ಸಂವಹನ ಸಂಬಂಧವಾಗಿ ಬೆಳೆದಿದೆ. ಇದಾದ ನಂತರ, ಇಬ್ಬರೂ ಸೇರಿಕೊಂಡು ಕುಟುಂಬ ಹಾಗೂ ಮಕ್ಕಳನ್ನು ಬಿಟ್ಟು, ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಓಡಿ ಹೋಗಿದ್ದಾರೆ ಎಂದು ದೂರು ದಾಖಲಾಗಿದೆ.

ಮಹಿಳೆಯ ಪತಿ ರಾಜು ಅವರು ಹರ್ಪಾಲ್‌ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜನವರಿ 3 ರಂದು ತರಕಾರಿ ಮತ್ತು ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಹೋಗುವುದಾಗಿ ಮಾರುಕಟ್ಟೆಗೆ ಹೋದ ತನ್ನ ಪತ್ನಿ ಈವರೆಗೆ ಹಿಂತಿರುಗಿಲ್ಲ. ಎಮ್ಮೆ ಮತ್ತು ಇತರೆ ಕೆಲಸದಿಂದ ಸಂಗ್ರಹಿಸಿದ 1.6 ಲಕ್ಷ ರೂ. ನಗದು, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಕುಟುಂಬ ನಡೆಸುವುದಾದರೂ ಹೇಗೆ ಎಂದು ಗಂಡ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow