6 ವಿದೇಶಿ ಆಟಗಾರರಿಗೆ ಆರ್ಸಿಬಿಯಿಂದ ಗೇಟ್ಪಾಸ್..!

- ಗ್ರೀನ್, ಜಾಕ್ಸ್ ಅವರನ್ನು ಉಳಿಸಿಕೊಳ್ಳಲಿದೆ ಆರ್ಸಿಬಿ ಫ್ರಾಂಚೈಸಿ.
- ಕನ್ನಡಿಗ ಕೆಎಲ್ ರಾಹುಲ್ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ತಂಡ.
- ಬೌಲಿಂಗ್ ವಿಭಾಗದಲ್ಲಿ ಹೊಸ ಸದಸ್ಯರ ಸೇರಿಸಿಕೊಳ್ಳಲು ಲೆಕ್ಕಾಚಾರ.
ಐಪಿಎಲ್ ಫ್ರಾಂಚೈಸಿಗಳು ಮುಂಬರುವ ಟೂರ್ನಿ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿವೆ. ಡಿಸೆಂಬರ್ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿವೆ. ಇದರಲ್ಲಿ ನಮ್ಮ ಆರ್ಸಿಬಿ ಕೂಡ ಹೊರತಾಗಿಲ್ಲ.
ಕಳೆದ ಬಾರಿ ಪ್ಲೇ-ಆಫ್ ಪ್ರವೇಶ ಮಾಡಿದ್ದ ಆರ್ಸಿಬಿ, ಈ ಸಲ ಕಪ್ ಹೊಡೆಯುವ ಛಲದಲ್ಲಿದೆ. ಹೀಗಾಗಿ ಬಲಾಢ್ಯ ತಂಡ ಕಟ್ಟುವ ಜವಾಬ್ದಾರಿ ಫ್ರಾಂಚೈಸಿ ಮೇಲಿದೆ. ಇನ್ನು, ಹರಾಜಿಗೂ ಮುನ್ನ ಕೆಲವು ವಿದೇಶಿ ಆಟಗಾರರನ್ನು ಕೈಬಿಡುವ ಲೆಕ್ಕಾಚಾರದಲ್ಲಿದೆ.
https://www.instagram.com/reel/C91x0oOyggZ/
ಪ್ರಮುಖ ಮೂರು ವಿದೇಶಿ ಆಟಗಾರರನ್ನು ಕೈಬಿಡಲಿದೆ. ಅದರಲ್ಲಿ ಪ್ರಮುಖವಾಗಿ ಮ್ಯಾಕ್ಸ್ವೆಲ್ ಇದ್ದಾರೆ. 2021ರಿಂದ 2023ರವರೆಗೆ ಆರ್ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್ವೆಲ್ 513, 2022ರಲ್ಲಿ 301, 2023ರಕ್ಕು 400 ರನ್ ಬಾರಿಸಿದ್ದರು. 2024ರಲ್ಲಿ ಕೇವಲ 52 ರನ್ ಮಾತ್ರ ಬಾರಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲೂ ಮ್ಯಾಕ್ಸ್ವೆಲ್ ಕೆಟ್ಟ ಪ್ರದರ್ಶನ ನೀಡಿ ಆರ್ಸಿಬಿ ಮ್ಯಾನೇಜ್ಮೆಂಟ್ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






