9.14 ಕೋಟಿ ಹಿಂಬಾಲಕರು : ಇನ್ಸ್ಟಾದಲ್ಲಿ ಪ್ರಧಾನಿ ಮೋದಿ ಹಿಂದಿಕ್ಕಿದ ಶ್ರದ್ಧಾ ಕಪೂರ್.

9.14 ಕೋಟಿ ಹಿಂಬಾಲಕರು : ಇನ್ಸ್ಟಾದಲ್ಲಿ ಪ್ರಧಾನಿ ಮೋದಿ ಹಿಂದಿಕ್ಕಿದ ಶ್ರದ್ಧಾ ಕಪೂರ್.
ಬಾಲಿವುಡ್‌ನ ಖ್ಯಾತ ನಟಿ ಶ್ರದ್ಧಾ ಕಪೂರ್ ಇನ್ಸ್ಟಾಗ್ರಾಂನಲ್ಲಿ 91.4 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹಿಂದಕ್ಕೆ ತಳ್ಳಿದ್ದಾರೆ. ಶ್ರದ್ಧಾ ಅಭಿನಯದ ಇತ್ತೀಚಿನ ಚಿತ್ರ ‘ಸ್ತ್ರೀ -2’ ಸೂಪರ್‌ಹಿಟ್ ಆದ ಬೆನ್ನಲ್ಲೇ ಅವರ ಹಿಂಬಾಲಕರ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯ ಮೋದಿ ಅವರಿಗೆ ಇನ್ಸ್ಟಾದಲ್ಲಿ 9.13 ಕೋಟಿ ಹಿಂಬಾಲಕರು ಇದ್ದಾರೆ, ಶ್ರದ್ಧಾಗೆ 9.14 ಕೋಟಿ ಜನರು ಇದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸದ್ಯ ವಿರಾಟ್ ಕೊಹ್ಲಿ (27.1 ಕೋಟಿ) ಮತ್ತು ನಟಿ ಪ್ರಿಯಾಂಕಾ ಚೋಪ್ರಾ (9.18 ಕೋಟಿ)ಭಾರತದಲ್ಲಿ ಅತಿ ಹೆಚ್ಚು ಹಿಂಬಾಲಕರ ಹೊಂದಿರುವವರ ಪಟ್ಟಿಯಲ್ಲಿ ಮೊದಲ 2 ಸ್ಥಾನ ಹೊಂದಿದ್ದಾರೆ. ಆದರೆ ಇದರ ಹೊರತಾಗಿಯೂ ಎಕ್ಸ್‌ನಲ್ಲಿ 10.12 ಕೋಟಿ ಹಿಂಬಾಲಕರೊಂದಿಗೆ ಮೋದಿ ಜಗತ್ತಿನ ನಂ.1 ನಾಯಕ ಎಂಬ ಹಿರಿಮೆ ಉಳಿಸಿಕೊಂಡಿದ್ದಾರೆ.
ಬಾಲಿವುಡ್‌ನ ಖ್ಯಾತ ನಟಿ ಶ್ರದ್ಧಾ ಕಪೂರ್ ಇನ್ಸ್ಟಾಗ್ರಾಂನಲ್ಲಿ 91.4 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹಿಂದಕ್ಕೆ ತಳ್ಳಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






