KCET Result 2025: ಇಂದು ಸಿಇಟಿ ಫಲಿತಾಂಶ ಪ್ರಕಟ: ರಿಸಲ್ಟ್ ಪರಿಶೀಲಿಸುವುದು ಹೇಗೆ?

ಮೇ 24, 2025 - 08:56
 0  7
KCET Result 2025: ಇಂದು ಸಿಇಟಿ ಫಲಿತಾಂಶ ಪ್ರಕಟ: ರಿಸಲ್ಟ್ ಪರಿಶೀಲಿಸುವುದು ಹೇಗೆ?

ಬೆಂಗಳೂರು: ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 15, 16, 17ರಂದು ಒಟ್ಟು 775 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿತ್ತುಇದೀಗ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಇಂದು ಬೆಳಗ್ಗೆ 11:30ಕ್ಕೆ ಫಲಿತಾಂಶ ಪ್ರಕಟ ಮಾಡಲಿದ್ದು, ಅಭ್ಯರ್ಥಿಗಳು ಮಧ್ಯಾಹ್ನ 2 ಗಂಟೆಗೆ ಕೆಇಎ ವೆಬ್ಸೈಟ್ನಲ್ಲಿ cetonline.karnataka.gov.in ಫಲಿತಾಂಶ ವೀಕ್ಷಿಸಬಹುದಾಗಿದೆ.

ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 15, 16, 17ರಂದು ಒಟ್ಟು 775 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿತ್ತು. ಕರ್ನಾಟಕದಲ್ಲಿ ಎಂಜಿನಿಯರಿಂಗ್, ಫಾರ್ಮಸಿ ಮತ್ತು ಕೃಷಿ ಪದವಿಪೂರ್ವ ಕೋರ್ಸ್ಗಳ ಪ್ರವೇಶಕ್ಕೆ ಸಿಇಟಿ ನಿರ್ಣಾಯಕವಾಗಿದೆ. ಸಿಇಟಿ ಫಲಿತಾಂಶ ಘೋಷಣೆಯ ನಂತರ KEA ಮೆರಿಟ್ ಲಿಸ್ಟ್ ಪ್ರಕಟಿಸುತ್ತದೆ.‌ ನಂತರ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿ, ಸೀಟು ಹಂಚಿಕೆ ಮಾಡಲಾಗುತ್ತದೆ.

ಸಿಇಟಿ ಫಲಿತಾಂಶ ಪರಿಶೀಲಿಸುವುದು ಹೇಗೆ?

  • ಕೆಇಎ ಅಧಿಕೃತ ವೆಬ್ಸೈಟ್‌ https://cetonline.karnataka.gov.in/keaಅಥವಾ https://karresults.nic.in/ ಭೇಟಿ ನೀಡಿ
  • ಮುಖಪುಟದಲ್ಲಿ ಪ್ರವೇಶ ಕೆಟಗರಿಯಲ್ಲಿ KCET ಲಿಂಕ್ಮೇಲೆ ಕ್ಲಿಕ್ಮಾಡಬೇಕು
  • ಬಳಿಕ ಹೆಸರಿನ ಮೊದಲ ನಾಲ್ಕು ಅಕ್ಷರಗಳೊಂದಿಗೆ, KCET ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
  • ನಂತರ KCET ಫಲಿತಾಂಶ ಲಭ್ಯವಾಗಲಿದ್ದು, ಡೌನ್ಲೋಡ್ಮಾಡಿಕೊಂಡು, ಪ್ರಿಂಟ್ಔಟ್ತೆಗೆದಿಟ್ಟುಕೊಳ್ಳಬಹುದು.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow