Amitabh Bachchan: ನಿಮಗೆ ಗೊತ್ತೆ..? ಅಮಿತಾಭ್ ಬಚ್ಚನ್ ಒಂದು ದಿನಕ್ಕೆ 1 ಕೋಟಿ ರೂಪಾಯಿ ದುಡಿಯುತ್ತಾರಂತೆ

ಖ್ಯಾತ ನಟಿಯರು ಯಾವುದಾದರೂ ಸ್ಟಾರ್ ನಟರ ಸಿನಿಮಾದಲ್ಲಿ ವಿಶೇಷವಾಗಿ ಡ್ಯಾನ್ಸ್ ಮಾಡಿದರೆ 2-3 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಸಮಂತಾ, ತಮನ್ನಾ ಅವರಂತಹ ನಟಿಯರೇ ಸ್ಪೆಷಲ್ ಡ್ಯಾನ್ಸ್ಗಾಗಿ ಕೆಲವೇ ಕೋಟಿ ಗಳಿಸೋದು.
ಆದರೆ ಪ್ರಸಿದ್ಧ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿಯನ್ನು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಾರೆ. ಆಕರ್ಷಣೀಯವಾದ ಅವರ ನಿರೂಪಣೆ, ಕಾರ್ಯಕ್ರಮ ನಡೆಸಿಕೊಡುವ ರೀತಿ ಎಲ್ಲರಿಗೂ ತುಂಬಾ ಇಷ್ಟ. ಇನ್ನು ವಿಶೇಷ ಎಂದರೆ ಕೆಬಿಸಿ ತನ್ನದೇ ಫಾಲೋವರ್ಸ್ಗಳನ್ನು ಹೊಂದಿದೆ. ಈ ಸೀಸನ್ ಕೆಬಿಸಿಯನ್ನು ಕೂಡಾ ಅಮಿತಾಭ್ ಬಚ್ಚನ್ ಅವರೇ ನಡೆಸಿಕೊಡುತ್ತಿದ್ದಾರೆ. ಈಗ ಒಂದು ಅಚ್ಚರಿಯ ವಿಚಾರ ರಿವೀಲ್ ಆಗಿದೆ.
ಅವರು ಒಂದು ದಿನದ ಆದಾಯ ಸುಮಾರು ಒಂದು ಕೋಟಿ ರೂಪಾಯಿನಷ್ಟಿದೆ. ಅವರು ಇಷ್ಟೆಲ್ಲ ಗಳಿಕೆ ಮಾಡಲು ಕಾರಣ ಆಗಿದ್ದು ಆ ಒಂದು ಪ್ರಾಜೆಕ್ಟ್ ಎನ್ನಲಾಗುತ್ತಿದೆ.
ಅಮಿತಾಭ್ ಬಚ್ಚನ್ ಅವರು ಭಾರತೀಯ ಚಿತ್ರರಂಗದ ದುಬಾರಿ ನಟರಲ್ಲಿ ಒಬ್ಬರು. ಅವರಿಗೆ 82 ವಸಂತಗಳು ಕಳೆದಿದ್ದು, 83ನೇ ವರ್ಷ ನಡೆಯುತ್ತಿದೆ. ಅವರು 2024-25ನೇ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ 120 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡಿದ ಹೀರೋ ಎನಿಸಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಈ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ. ಅಂದರೆ ಒಂದು ದಿನಕ್ಕೆ ಅವರ ಆದಾಯ ಬರೋಬ್ಬರಿ 95 ಲಕ್ಷ ರೂಪಾಯಿ. ಇಷ್ಟು ದೊಡ್ಡ ಮೊತ್ತದಲ್ಲಿ ಅವರು ಗಳಿಕೆ ಮಾಡಿರುವುದರಿಂದಲೇ ಅವರು 120 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ.
ಕೆಬಿಸಿ 16
‘ಕೌನ್ ಬನೇಗಾ ಕರೋಡ್ಪತಿ 16’ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಇದಕ್ಕೆ ಅವರು ಪ್ರತಿ ಎಪಿಸೋಡ್ಗೆ ತೆಗೆದುಕೊಂಡಿದ್ದು ಬರೋಬ್ಬರಿ 5 ಕೋಟಿ ರೂಪಾಯಿ. ಈ ಮೂಲಕ ಅವರು ಭಾರತದ ದುಬಾರಿ ಹೋಸ್ಟ್ ಎನಿಸಿಕೊಂಡಿದ್ದಾರೆ. ಇದರಿಂದಾಗಿಯೇ ಅವರ ಗಳಿಕೆ ಹೆಚ್ಚಿದೆ. ಇದರ ಜೊತೆಗೆ ಅವರು ಸಿನಿಮಾ ಗಳಿಕೆ, ಬ್ರ್ಯಾಂಡ್ಗಳ ಪ್ರಚಾರಗಳಿಂದ ಹಣ ಮಾಡುತ್ತಾರೆ.
ನಿಮ್ಮ ಪ್ರತಿಕ್ರಿಯೆ ಏನು?






