ಕೌಟುಂಬಿಕ ಕಲಹ: ಹೆಂಡ್ತಿ ಕೊಲೆಗೈದು ಗಂಡ ಸೂಸೈಡ್!

ದೇವನಹಳ್ಳಿ:- ವಿಜಯಪುರ ಪಟ್ಟಣದ ದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ಹೆಂಡತಿಯನ್ನು ಕೊಲೆ ಮಾಡಿ ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ. 40 ವರ್ಷದ ಶಾಮಣ್ಣ ಮತ್ತು 35 ವರ್ಷದ ಸುಮ ಮೃತರು.
ಹೆಂಡತಿಯನ್ನು ಡಂಬಲ್ಸ್ ನಲ್ಲಿ ಹೊಡೆದು ಮೊದಲು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಂತರ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗಂಡ ಹೆಂಡತಿ ಕಲಹಕ್ಕೆ ಇಬ್ಬರು ಗಂಡು ಮಕ್ಕಳು ಅನಾಥಾರಾಗಿದ್ದಾರೆ. ಕೂಡಲೇ ವಿಜಯಪುರ ಪೋಲಿಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಸಿ.ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






