Bangalore: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ..! ತಲೆ ಮೇಲೆಯೇ ಹರಿಯಿತು ಬಸ್ ಚಕ್ರ

ಆಗಸ್ಟ್ 20, 2025 - 12:04
 0  18
Bangalore: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ..! ತಲೆ ಮೇಲೆಯೇ ಹರಿಯಿತು ಬಸ್ ಚಕ್ರ

ಬೆಂಗಳೂರು: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಮತ್ತೊಂದು ಬಲಿ ತೆಗೆದುಕೊಂಡಿದೆ. ವ್ಯಕ್ತಿಯೋರ್ವ ಚಲಿಸುತ್ತಿದ್ದ ಬಸ್​ ಹತ್ತಲು ಹೋಗಿ ಚಕ್ರದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಯನಗರದಲ್ಲಿ ನಡೆದಿದೆ.

ಬಸ್ ಹತ್ತಲು ಹೋದಾಗ ಬಸ್​ ಮುಂದೆ ಚಲಿಸುತ್ತಿತ್ತು. ಈ ವೇಳೆ ಸ್ಲಿಪ್ ಆಗಿ ಆಯತಪ್ಪಿ ಬಿದ್ದ ವ್ಯಕ್ತಿ ಮೇಲೆ ಬಸ್ ಹತ್ತಿದೆ. ಜಯನಗರ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬಸ್​ನ ಮುಂಭಾಗದ ಚಕ್ರ ತಲೆ ಮೇಲೆ ಹರಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.  ಜಯನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow