ನನ್ನ ಹಾಗೂ ರಾಮುಲು ನಡುವಿನ ಸ್ನೇಹ ಸಾಮಾನ್ಯವಾದುದ್ದಲ್ಲ: ಜನಾರ್ದನ ರೆಡ್ಡಿ

ಬಳ್ಳಾರಿ,: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ತಮ್ಮ ಹಾಗೂ ಬಿ. ಶ್ರೀರಾಮುಲು ಅವರ ನಡುವೆ ಇತ್ತೀಚೆಗೆ ಕೇಳಿಬರುತ್ತಿರುವ ವೈಮನಸ್ಸು ತೀರಿಸಲು ಯಾರ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ರೆಡ್ಡಿ, "ನಮ್ಮಿಬ್ಬರ ನಡುವೆ ಯಾರೂ ಬೇಕಾಗಿಲ್ಲ. ನಮ್ಮ ಸಂಬಂಧವನ್ನು ಹೊರಗಿಂದ ದೆಹಲಿಯಿಂದ ಕರೆದೋ, ಬೇರೆಯವರ ಮಾತಿನಿಂದೋ ಬದಲಾಯಿಸಲಾಗದು, ಎಂದು ಖಡಕ್ ಹೇಳಿಕೆ ನೀಡಿದ್ದಾರೆ.
"ಈಗ ನಮ್ಮ ಸ್ನೇಹದ ಬಗ್ಗೆ ಮಾತನಾಡೋ ಅವಶ್ಯಕತೆಯೇ ಇಲ್ಲ,"ಎಂದು ಅವರು ಮುಂದುವರಿದು, "ಪ್ರೀತಿ ಮತ್ತು ಸ್ನೇಹ ಎನ್ನುವುದು ಒಬ್ಬರೊಬ್ಬರ ಮೇಲೆ ಇರುವ ಆಳವಾದ ನಂಬಿಕೆ. ಅದು ಒಂದಿಷ್ಟು ಘಟನೆಗಳಿಂದ ಬದಲಾಗಲಾರದು. ನಾನು ಹಾಗೂ ರಾಮುಲು 15–16 ವರ್ಷದವಯಸ್ಸಿನಿಂದ ಸ್ನೇಹಿತರು. ಈಗ 40 ವರ್ಷಗಳಿಂದ ಜೊತೆಗೆ ಇದ್ದೇವೆ ಎಂದು ನೆನೆಸಿಕೊಂಡರು.
ನಿಮ್ಮ ಪ್ರತಿಕ್ರಿಯೆ ಏನು?






