Bank Holidays: ಡಿಸೆಂಬರ್ʼನಲ್ಲಿ ಬ್ಯಾಂಕ್ʼಗಳಿಗೆ 17 ದಿನ ರಜೆ! ಯಾವ ದಿನ ಅಂತ ಇಲ್ಲಿದೆ ನೋಡಿ ಲಿಸ್ಟ್

ಬ್ಯಾಂಕಿನಲ್ಲಿ ಏನಾದರೂ ಕೆಲಸವಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ, ಯಾಕಂದ್ರೆ ಡಿಸೆಂಬರ್ʼನಲ್ಲಿ ಬ್ಯಾಂಕ್ʼಗಳಿಗೆ 17 ದಿನ ಮುಚ್ಚಿರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 17 ದಿನಗಳಲ್ಲಿ ಬ್ಯಾಂಕ್ನಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಇದು ದೇಶಾದ್ಯಂತ ಇರುವ ಬ್ಯಾಂಕ್ಗಳಿಗೆ ಅನ್ವಯವಾಗಲಿದ್ದು, ಪ್ರಾದೇಶಿಕವಾರು ರಜೆಗಳು ಇರಲಿವೆ.
ಕರ್ನಾಟಕ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಡಿಸೆಂಬರ್ನಲ್ಲಿ 8 ರಜಾದಿನಗಳು ಮಾತ್ರವೇ ಇರುವುದು. ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ಮೇಘಾಲಯ, ಮಿಝೋರಾಂನಲ್ಲಿ ಈ ತಿಂಗಳು ಹೆಚ್ಚು ರಜೆ ಇದೆ. ಗೋವಾ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲೂ ಡಿಸೆಂಬರ್ನಲ್ಲಿ ಹೆಚ್ಚು ರಜೆಯನ್ನು ಕಾಣಬಹುದು. ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೇಶದ ಎಲ್ಲೆಡೆ ಸಾರ್ವತ್ರಿಕ ರಜೆ ಇರುತ್ತದೆ.
2024ರ ಡಿಸೆಂಬರ್ನಲ್ಲಿ ಬ್ಯಾಂಕುಗಳ ರಜಾದಿನಗಳ ಪಟ್ಟಿ
- ಡಿಸೆಂಬರ್ 1: ಭಾನುವಾರದ ರಜೆ
- ಡಿಸೆಂಬರ್ 3, ಮಂಗಳವಾರ: ಸೇಂಟ್ ಫ್ರಾನ್ಸಿಸ್ ಜೇವಿಯರ್ ಔತಣ (ಗೋವಾದಲ್ಲಿ ರಜೆ)
- ಡಿಸೆಂಬರ್ 8: ಭಾನುವಾರದ ರಜೆ
- ಡಿಸೆಂಬರ್ 14: ಎರಡನೇ ಶನಿವಾರದ ರಜೆ
- ಡಿಸೆಂಬರ್ 12, ಗುರುವಾರ: ಪಾ ತೋಗನ್ ನೆಂಗ್ಮಿಂಜಾ ಸಾಂಗ್ಮಾ (ಮೇಘಾಲಯದಲ್ಲಿ ರಜೆ)
- ಡಿಸೆಂಬರ್ 15: ಭಾನುವಾರದ ರಜೆ
- ಡಿಸೆಂಬರ್ 18, ಬುಧವಾರ: ಗುರು ಘಾಸಿದಾಸ್ ಜಯಂತಿ, ಉ ಸೋಸೋ ತಾಮ್ ಪುಣ್ಯತಿಥಿ (ಪಂಜಾಬ್, ಹರ್ಯಾಣದಲ್ಲಿ, ಹಾಗು ಮೇಘಾಲಯದಲ್ಲಿ ರಜೆ)
- ಡಿಸೆಂಬರ್ 19, ಗುರುವಾರ: ಗೋವಾ ವಿಮೋಚನಾ ದಿನ (ಗೋವಾದಲ್ಲಿ ರಜೆ)
- ಡಿಸೆಂಬರ್ 22: ಭಾನುವಾರದ ರಜೆ
- ಡಿಸೆಂಬರ್ 24, ಮಂಗಳವಾರ: ಕ್ರಿಸ್ಮಸ್, ಗುರು ತೇಗ್ ಬಹದೂರ್ ಬಲಿದಾನ ದಿನ (ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಹಾಗೂ ಪಂಜಾಬ್, ಹರ್ಯಾಣದಲ್ಲಿ ರಜೆ)
- ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬಕ್ಕೆ ದೇಶಾದ್ಯಂತ ಎಲ್ಲೆಡೆ ರಜೆ
- ಡಿಸೆಂಬರ್ 26, ಗುರುವಾರ: ಮೇಘಾಲಯ, ನಾಗಾಲ್ಯಾಂಡ್ ಮೊದಲಾದ ಕೆಲವೆಡೆ ರಜೆ
- ಡಿಸೆಂಬರ್ 27, ಶುಕ್ರವಾರ: ನಾಗಾಲ್ಯಾಂಡ್ನಲ್ಲಿ ರಜೆ
- ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
- ಡಿಸೆಂಬರ್ 29: ಭಾನುವಾರದ ರಜೆ
- ಡಿಸೆಂಬರ್ 30, ಸೋಮವಾರ: ಟಮು ಲೋಸರ್, ಯು ಕಿಯಾಂಗ್ ನಾಂಗ್ಬಾ (ಸಿಕ್ಕಿಂ, ಮೇಘಾಲಯದಲ್ಲಿ ರಜೆ)
- ಡಿಸೆಂಬರ್ 31, ಮಂಗಳವಾರ: ಹೊಸ ವರ್ಷಾಚರಣೆ ಪ್ರಯುಕ್ತ ಮಿಜೋರಾಂನಲ್ಲಿ ರಜೆ
ಕರ್ನಾಟಕದಲ್ಲಿ ಡಿಸೆಂಬರ್ನಲ್ಲಿ 8 ಬ್ಯಾಂಕ್ ರಜಾದಿನಗಳು
ಕರ್ನಾಟಕ ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಒಂದೇ ಒಂದು ಸಾರ್ವತ್ರಿಕ ರಜೆ ಇರುವುದು. ಅದು ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬಕ್ಕೆ. ಅದು ಬಿಟ್ಟರೆ ಈ ತಿಂಗಳು ಒಂದು ಹೆಚ್ಚುವರಿ ಭಾನುವಾರ ಸಿಕ್ಕಿದೆ. ಒಟ್ಟು ಐದು ಭಾನುವಾರಗಳು ಹಾಗೂ ಎರಡು ಶನಿವಾರದ ರಜೆಗಳಿವೆ. ಕ್ರಿಸ್ಮಸ್ ಹಬ್ಬವೂ ಸೇರಿದರೆ ಡಿಸೆಂಬರ್ನಲ್ಲಿ ಕರ್ನಾಟಕದಲ್ಲಿ ರಜಾದಿನಗಳ ಸಂಖ್ಯೆ 8 ಆಗುತ್ತದೆ.
- ಡಿಸೆಂಬರ್ 1: ಭಾನುವಾರದ ರಜೆ
- ಡಿಸೆಂಬರ್ 8: ಭಾನುವಾರದ ರಜೆ
- ಡಿಸೆಂಬರ್ 14: ಎರಡನೇ ಶನಿವಾರದ ರಜೆ
- ಡಿಸೆಂಬರ್ 15: ಭಾನುವಾರದ ರಜೆ
- ಡಿಸೆಂಬರ್ 22: ಭಾನುವಾರದ ರಜೆ
- ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬ
- ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
- ಡಿಸೆಂಬರ್ 29: ಭಾನುವಾರದ ರಜೆ
ನಿಮ್ಮ ಪ್ರತಿಕ್ರಿಯೆ ಏನು?






