ಭಾರತ ಕ್ರಿಕೆಟ್ʼ​ಗೆ ದಿಢೀರ್ ಗುಡ್ ಬೈ ಹೇಳಿದ ಟೀಂ ಇಂಡಿಯಾ ವೇಗಿ!

ನವೆಂಬರ್ 29, 2024 - 22:22
 0  13
ಭಾರತ ಕ್ರಿಕೆಟ್ʼ​ಗೆ ದಿಢೀರ್ ಗುಡ್ ಬೈ ಹೇಳಿದ ಟೀಂ ಇಂಡಿಯಾ ವೇಗಿ!

ಭಾರತ ಕ್ರಿಕೆಟ್​ಗೆ ಟೀಂ ಇಂಡಿಯಾ ವೇಗಿ ವೇಗಿ ಸಿದ್ಧಾರ್ಥ್ ಕೌಲ್  ದಿಢೀರ್ ಗುಡ್ ಬೈ ಹೇಳಿದ್ದಾರೆ.  2019ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದ ಸಿದ್ಧಾರ್ಥ್, ಅಂದಿನಿಂದ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.

ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸಿದ್ಧಾರ್ಥ್ ಕೌಲ್ ನಿವೃತ್ತಿ ಘೋಷಿಸಿದ್ದಾರೆ. ಸಿದ್ಧಾರ್ಥ್ ಟೀಂ ಇಂಡಿಯಾ ಪರ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದು, ಅವರು ಐಪಿಎಲ್‌ನಲ್ಲೂ ಆಡಿದ್ದಾರೆ.

ನಾನು ಬಾಲ್ಯದಲ್ಲಿ ಮತ್ತು ಪಂಜಾಬ್‌ನ ಮೈದಾನಗಳಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ದೇಶವನ್ನು ಪ್ರತಿನಿಧಿಸುವ ಕನಸು ಕಂಡಿದ್ದೆ. ದೇವರ ದಯೆಯಿಂದ ಆ ಕನಸು 2018 ರಲ್ಲಿ ನನಸಾಯಿತು.

ಟಿ20 ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 75 ಮತ್ತು ಏಕದಿನ ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 221 ಆಗಿತ್ತು. ಈಗ ನಾನು ಭಾರತದಲ್ಲಿ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವ ಮತ್ತು ನನ್ನ ನಿವೃತ್ತಿಯನ್ನು ಘೋಷಿಸುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow