ಬಾಡಿ ಹೆಚ್ಚು ಹೀಟ್ ಆಗಿದ್ರೆ ಕ್ಯಾಪ್ಸಿಕಂ ತಿನ್ನಬಾರದಾ? ತಿಂದ್ರೆ ಏನಾಗತ್ತೆ?

ಅಕ್ಟೋಬರ್ 12, 2025 - 06:57
 0  10
ಬಾಡಿ ಹೆಚ್ಚು ಹೀಟ್ ಆಗಿದ್ರೆ ಕ್ಯಾಪ್ಸಿಕಂ ತಿನ್ನಬಾರದಾ? ತಿಂದ್ರೆ ಏನಾಗತ್ತೆ?

ನೈಸರ್ಗಿಕವಾಗಿ ಸಿಗುವ ಒಂದೊಂದು ತರಕಾರಿಯಿಂದ ಒಂದೊಂದು ಬಗೆಯ ಪೌಷ್ಟಿಕ ಸತ್ವಗಳು ನಮ್ಮ ಆರೋಗ್ಯ ಕ್ಕೆ ಸಿಗುತ್ತದೆ. ಉದಾಹರಣೆಗೆ ಹೇಳುವುದಾದರೆ, ಬೀಟ್ರೋಟ್ ಸೇವಿಸಿದರೆ, ದೇಹಕ್ಕೆ ಹೆಚ್ಚು ರಕ್ತ ಸೇರುತ್ತದೆ, ಅದೇ ರೀತಿ ಕ್ಯಾರೆಟ್ ಸೇವನೆ ಮಾಡುವುದರಿಂದ ಬುದ್ಧಿ ಚುರುಕಾಗುತ್ತದೆ, ಹಾಗೂ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಇದೇ ಗುಂಪಿಗೆ ವಿವಿಧ ಬಣ್ಣಗಳಲ್ಲಿ ದೊರೆಯುವ ಕ್ಯಾಪ್ಸಿಕಂ ಅಥವಾ ದೊಡ್ಡ ಮೆಣಸಿನಕಾಯಿ ಕೂಡ ಸೇರುತ್ತದೆ.

ಆಹಾರ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೇ ಆರೋಗ್ಯಕ್ಕೂ ಕ್ಯಾಪ್ಸಿಕಂ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಅನೇಕ ಮಂದಿ ಕ್ಯಾಪ್ಸಿಕಂ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುವುದನ್ನೂ ಕೂಡ ನೀವು ಕೇಳಿರಬಹುದು.

ವಾಸ್ತವವಾಗಿ ಅಗತ್ಯಕ್ಕಿಂತ ಹೆಚ್ಚು ಕ್ಯಾಪ್ಸಿಕಂ ಸೇವಿಸುವುದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಹಾಗಾದ್ರೆ ಅತಿಯಾಗಿ ಕ್ಯಾಪ್ಸಿಕಂ ತಿನ್ನುವುದರಿಂದ ಆರೋಗ್ಯದ ಮೇಲೆ ಬೀರುವ ಅಡ್ಡಪರಿಣಾಮಗಳು ಯಾವುವು ಎಂದು ತಿಳಿಯೋಣ ಬನ್ನಿ.

ಕ್ಯಾಪ್ಸಿಕಂ ತಿನ್ನುವುದರಿಂದ ಆಗುವ ಅನಾನುಕೂಲಗಳೇನು?: ಕ್ಯಾಪ್ಸಿಕಂನ ಅತಿಯಾದ ಸೇವನೆಯು ರಕ್ತದೊತ್ತಡದ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ರಕ್ತದೊತ್ತಡ ಸಮಸ್ಯೆ ಇರುವವರು ಅತಿಯಾದ ಕ್ಯಾಪ್ಸಿಕಂ ಸೇವಿಸುವುದನ್ನು ನಿಲ್ಲಿಸಬೇಕು

ಕ್ಯಾಪ್ಸಿಕಂ ಅತಿಯಾಗಿ ತಿನ್ನುವುದರಿಂದ ಅಲರ್ಜಿಯಂತಹ ಸಮಸ್ಯೆಯನ್ನು ಸಹ ಎದುರಿಸಬೇಕಾಗಬಹುದು. ಇದರಿಂದ ತ್ವಚೆಯ ಮೇಲೆ ದದ್ದು ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು. ರಕ್ತ ಸಂಬಂಧಿ ಸಮಸ್ಯೆ ಇರುವವರು ಅತಿಯಾದ ಕ್ಯಾಪ್ಸಿಕಂ ಸೇವಿಸುವುದನ್ನು ತಪ್ಪಿಸಬೇಕು. ಇದರ ಅತಿಯಾದ ಸೇವನೆಯು ಮಧುಮೇಹಿಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೂ ಮುನ್ನ ಮತ್ತು ನಂತರ ವ್ಯಕ್ತಿ ಕ್ಯಾಪ್ಸಿಕಂ ಅನ್ನು ಸೇವಿಸಬಾರದು. ಏಕೆಂದರೆ ಇದು ರಕ್ತಸ್ರಾವದ ಅಪಾಯವನ್ನು ಮತ್ತಷ್ಟು ಹೆಚ್ಚಿಸಬಹುದು. 

ಕ್ಯಾಪ್ಸಿಕಂ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಕ್ಯಾಪ್ಸಿಕಂ ಸೇವಿಸುವುದರಿಂದ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸಬಹುದು. ಹಾಗಾಗಿ ಹೀಟ್ ಬಾಡಿ ಹೊಂದಿರುವವರು ಕ್ಯಾಪ್ಸಿಕಂ ತಿನ್ನುವುದನ್ನು ನಿಲ್ಲಿಸಬೇಕು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow