BBK 11: ನಾಳೆ ವೀಕೆಂಡ್ ಎಪಿಸೋಡ್ ಗೆ ಬರ್ತಾರಾ ಸುದೀಪ್!? ಪರೋಕ್ಷವಾಗಿ ಬಿಗ್ ಬಾಸ್ ಹೇಳಿದ್ದೇನು!?

ನವೆಂಬರ್ 1, 2024 - 20:47
 0  33
BBK 11: ನಾಳೆ ವೀಕೆಂಡ್ ಎಪಿಸೋಡ್ ಗೆ ಬರ್ತಾರಾ ಸುದೀಪ್!? ಪರೋಕ್ಷವಾಗಿ ಬಿಗ್ ಬಾಸ್ ಹೇಳಿದ್ದೇನು!?

ತಾಯಿ ಅಗಲಿಕೆಯಿಂದ ಕಳೆದ ವಾರ ಎಪಿಸೋಡ್ ಗೆ ಗೈರಾಗಿದ್ದ ಸುದೀಪ್ ಅವರು, ಈ ವಾರ ಎಂಟ್ರಿ ಕೊಡ್ತಾರ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪರೋಕ್ಷವಾಗಿ ಬಿಗ್ ಬಾಸ್ ಉತ್ತರ ಕೊಟ್ಟಿದೆ. 

ಎಲ್ಲ ಕಡೆಗಳಲ್ಲಿ ದೀಪಾವಳಿ ಆಚರಣೆ ಜೋರಾಗಿದೆ. ಶನಿವಾರವೂ ದೀಪಾವಳಿ ಹಬ್ಬ ಆಚರಣೆ ಇರುತ್ತದೆ. ಹೀಗಾಗಿ ಮನೆಯವರಿಗೆ ಗ್ರ್ಯಾಂಡ್ ಆಗಿ ರೆಡಿ ಆಗೋಕೆ ಅವಕಾಶ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಚಟುವಟಿಕೆ ಒಂದನ್ನು ಬಿಗ್ ಬಾಸ್ ನೀಡಿದ್ದರು.

ಚಟುವಟಿಕೆ​ ಪ್ರಕಾರ ಖಾಸಗಿ ಬಟ್ಟೆ ಕಂಪನಿಯೊಂದರ ಕ್ಯಾಟ್​ಲಾಗ್​ನ ಕಳುಹಿಸಿಕೊಟ್ಟಿದ್ದರು ಬಿಗ್ ಬಾಸ್. ಅವರಿಷ್ಟದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ವಾರಾಂತ್ಯದ ಎಪಿಸೋಡ್​ಗೆ ಕಳುಹಿಸಿಕೊಡುವುದಾಗಿ ಸೂಚನೆ ಬಂದಿದೆ. ಇಷ್ಟು ಗ್ರ್ಯಾಂಡ್ ಆಗಿ ವೀಕೆಂಡ್ ಎಪಿಸೋಡ್ ನಡೆಯಲಿದೆ ಎಂದರೆ ಸುದೀಪ್ ಬಂದೇ ಬರುತ್ತಾರೆ ಅನ್ನೋದು ಮನೆಯ ಸದಸ್ಯರ ನಂಬಿಕೆ.

ಕಳೆದ ವೀಕೆಂಡ್​ನಲ್ಲಿ ಯೋಗರಾಜ್ ಭಟ್ ಹಾಗೂ ಸೃಜನ್ ಲೋಕೇಶ್ ಅವರು ದೊಡ್ಮನೆ ಒಳಗೆ ಬಂದಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಫನ್ ಚಟುವಟಿಕೆಗಳು ನಡೆದಿದ್ದವು. ಈ ಬಾರಿ ಸುದೀಪ್ ಅವರೇ ಬರಲಿ ಎಂದು ವೀಕ್ಷಕರು ಹಾಗೂ ಮನೆಯ ಸದಸ್ಯರು ಬಯಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow