BBK 11 Grand Finale: ಟ್ರೋಫಿ ಬಿಟ್ಟು ಸೂಟ್ ಕೇಸ್’ಗೆ ಕೈ ಹಾಕ್ತಾರಾ ಫಿನಾಲೆ ಸ್ಪರ್ಧಿಗಳು..!?

ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಗೆ ಕಿಚ್ಚ ಸುದೀಪ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಗ್ರ್ಯಾಂಡ್ ಫಿನಾಲೆಯ ಎರಡನೇ ದಿನವಾದ ಇಂದು ಬಿಗ್ ಬಾಸ್ ವಿಜೇತರು ಯಾರು ಎಂಬುದು ಘೋಷಣೆಯಾಗಲಿದೆ.
ಅದಲ್ಲದೆ 20 ಲಕ್ಷ ಹಣ ಬೇಕಿದ್ದರೆ ಟ್ರೋಫಿ ತ್ಯಾಗ ಮಾಡಿ, ಆಟವನ್ನು ಅರ್ಧಕ್ಕೆ ನಿಲ್ಲಿಸಿ ಹೋಗಬಹುದು ಎಂಬ ಅವಕಾಶವನ್ನು ಬಿಗ್ ಬಾಸ್ 5 ಫೈನಲಿಸ್ಟ್ಗೆ ನೀಡಿದೆ. ಬಿಗ್ಬಾಸ್ ಮನೆಯಲ್ಲಿ ಟಾಪ್ 5 ಫೈನಲಿಸ್ಟ್ಗಳಿಗೆ ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಕಿಚ್ಚ ಸುದೀಪ್ ಶಾಕ್ ಕೊಟ್ಟಿದ್ದಾರೆ. ಹೌದು, ರಿಲೀಸ್ ಆಗಿರೋ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಮನೆಯ ಒಳಗಡೆ ಒಂದು ಸೂಟ್‍ಕೇಸ್ ಕಳುಹಿಸಿದ್ದಾರೆ. ಜೊತೆಗೆ ಆ ಸೂಟ್‍ಕೇಸ್‍ನಲ್ಲಿ ಹಣವನ್ನು ಇಟ್ಟಿದ್ದಾರೆ.
ಮನೆಗೆ ಒಳಗಡೆ ಸೂಟ್‍ಕೇಸ್ ಕಳುಹಿಸಿದ ಕಿಚ್ಚ, ಹೊಸ ಟ್ವಿಸ್ಟ್ ಎನ್ನುತ್ತಲೇ ಈಗ ನಿಮ್ಮ ಮುಂದೆ ಒಂದು ಸೂಟ್‍ಕೇಸ್ ಇದೆ. ಈ ಸೂಟ್‍ಕೇಸ್‍ನಲ್ಲಿ ಒಂದಿಷ್ಟು ಹಣ ಇದೆ. ಈ ಸಂದರ್ಭದಲ್ಲಿ ನಿಮ್ಮಲ್ಲಿ ಯಾರಾದ್ರೂ ಒಬ್ಬರು ಸೂಟ್‍ಕೇಸ್ ಅನ್ನು ತೆಗೆದುಕೊಂಡು ಹೋಗಬಹುದು. ಹೊರಗಡೆ ಒಂದು ಕಾರು ರೆಡಿ ಇದೆ. ಕಾರು ಹತ್ತಿ ನೇರವಾಗಿ ಮನೆಗೆ ಹೋಗಬಹುದು ಎಂದಿದ್ದಾರೆ. ಆಗ ಬಿಗ್ಬಾಸ್ ಟಾಪ್ 5 ಫೈನಲಿಸ್ಟ್ಗಳು ಒಬ್ಬರಿಗೊಬ್ಬರು ಮುಖವನ್ನು ನೋಡಿಕೊಂಡಿದ್ದಾರೆ. ಆಗ ಏಕಾಏಕಿ ರಜತ್ ಎದ್ದು ಸೂಟ್‍ಕೇಸ್ ಎತ್ತಿಕೊಳ್ಳುವಂತೆ ಪ್ರೋಮೋದಲ್ಲಿ ತೋರಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






