BBK 12: ಬಿಗ್ ಬಾಸ್ ಮನೆಯೊಳಗೆ ಹೋಗೋರು ಇವರೇನಾ? ಇಲ್ಲಿದೆ ನೋಡಿ ಫುಲ್‌ ಡಿಟೈಲ್ಸ್‌

ಸೆಪ್ಟೆಂಬರ್ 18, 2025 - 20:02
 0  16
BBK 12: ಬಿಗ್ ಬಾಸ್ ಮನೆಯೊಳಗೆ ಹೋಗೋರು ಇವರೇನಾ? ಇಲ್ಲಿದೆ ನೋಡಿ ಫುಲ್‌ ಡಿಟೈಲ್ಸ್‌

ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 12’ ಇನ್ನೇನು ಪ್ರಾರಂಭವಾಗಲಿದೆ. ಸೆಪ್ಟೆಂಬರ್ 28ರಿಂದ ಶೋ ಪ್ರಸಾರವಾಗಲಿದ್ದು, ನಿರೂಪಕರಾದ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವ ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಸದ್ದು ಮಾಡುತ್ತಿವೆ.

ಇನ್ನೊಂದೆಡೆ, ಸಂಭಾವ್ಯ ಸ್ಪರ್ಧಿಗಳ ಹೆಸರುಗಳ ಲಿಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ವೈರಲ್ ಆಗುತ್ತಿದೆ. ಈ ಬಾರಿ ಯಾರು ಮನೆಯೊಳಗೆ ಪ್ರವೇಶಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ.

ಹರಿದಾಡುತ್ತಿರುವ ಹೆಸರುಗಳಲ್ಲಿ ಧಾರಾವಾಹಿ ನಟ ಸಾಗರ್ ಬಿಲ್ಲಿಗೌಡ, ನಟಿ ಶ್ವೇತಾ ಪ್ರಸಾದ್, ಸಂಜನಾ ಬುರ್ಲಿ, ಸುದ್ದಿ ನಿರೂಪಕಿ ದಿವ್ಯಾ ವಸಂತ್ ಸೇರಿದ್ದಾರೆ. ಜೊತೆಗೆ, ಸೋಷಿಯಲ್ ಮೀಡಿಯಾ ಖ್ಯಾತಿಯ ಸ್ಯಾಮ್ ಸಮೀರ್, "ಡಾಕ್ಟರ್ ಬ್ರೋ" ಫೇಮಸ್ ಗಗನ್ ಶ್ರೀನಿವಾಸ್ ಹೆಸರುಗಳೂ ಲಿಸ್ಟ್‌ನಲ್ಲಿ ಕೇಳಿಬರುತ್ತಿವೆ.

ಮೇಘಾ ಶೆಟ್ಟಿ, ಸಂಖ್ಯಾಶಾಸ್ತ್ರಜ್ಞ ಅರವಿಂದ ರತನ್, ಯೂಟ್ಯೂಬ್ ಸೆನ್ಶೇಶನ್ ಪಾಯಲ್ ಚೆಂಗಪ್ಪ, ವರುಣ್ ಆರಾಧ್ಯ, ಗಗನಾ ಭಾರಿ, ಧಾರಾವಾಹಿ ನಟ ವಿಜಯ್ ಸೂರ್ಯ, ದೀಪಿಕಾ ಗೌಡ, ಅಮೃತಾ ರಾಮಮೂರ್ತಿ, ಸಿಂಗರ್ ಸುನೀಲ್, ಬಾಳು ಬೆಳಗುಂದಿ, ಧನುಶ್ ಮತ್ತು ಸ್ವಾತಿ ಹೆಸರುಗಳೂ ಪಟ್ಟಿಯಲ್ಲಿ ಸೇರಿವೆ.

ಆದರೆ, ಈ ಹೆಸರುಗಳನ್ನು ಚಾನೆಲ್ ಅಥವಾ ಶೋ ತಂಡ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಬಿಗ್ ಬಾಸ್ ಮನೆಗೆ ನಿಜವಾಗಿ ಯಾರು ಪ್ರವೇಶಿಸಲಿದ್ದಾರೆ ಎಂಬುದು ಸೆಪ್ಟೆಂಬರ್ 28ರಂದು ಶೋ ಆರಂಭವಾದ ನಂತರವೇ ಸ್ಪಷ್ಟವಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow