ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ನಡೆದಿದೆ ಮತಗಳ್ಳತನ: ರಾಹುಲ್ ಗಾಂಧಿ ಆರೋಪ

ಸೆಪ್ಟೆಂಬರ್ 18, 2025 - 12:09
 0  14
ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ನಡೆದಿದೆ ಮತಗಳ್ಳತನ: ರಾಹುಲ್ ಗಾಂಧಿ ಆರೋಪ

ನವದೆಹಲಿ: ಕರ್ನಾಟಕದ ಕಲಬುರಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಮಹದೇವಪುರ ಕ್ಷೇತ್ರದಲ್ಲೂ ಇದೇ ರೀತಿಯ ಘಟನೆ ನಡೆದಿದೆ ಎಂದು ಹೇಳದರು.

ಕಾಂಗ್ರೆಸ್ ಮತದಾರರನ್ನೇ ಟಾರ್ಗೆಟ್ ಮಾಡಿ, ಆದಿವಾಸಿಗಳು ಮತ್ತು ಒಬಿಸಿ ಸೇರಿದಂತೆ ವಿರೋಧ ಪಕ್ಷಕ್ಕೆ ಮತಹಾಕುವವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಆಳಂದ ಕ್ಷೇತ್ರದಲ್ಲಿ ಬಿಎಲ್‌ಒ ಅವರ ಸಂಬಂಧಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದರಿಂದ ವಿಚಾರಣೆ ಪ್ರಾರಂಭವಾಯಿತು. ತನಿಖೆಯಲ್ಲಿ ಅವರ ಸಂಬಂಧಿಯ ಪಕ್ಕದ ಮನೆಮಂದಿಯವರ ಹೆಸರನ್ನೂ ತೆಗೆಸಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಆದರೆ ಅವರು ಯಾವುದೇ ಅರ್ಜಿಯನ್ನೂ ಸಲ್ಲಿಸಿಲ್ಲವೆಂದು ಹೇಳಿದಾಗ, ಮತಗಳ್ಳತನದ ಸುಳಿವು ಬಹಿರಂಗವಾಯಿತು.

ಒಬ್ಬರ ಹೆಸರನ್ನು ಬಳಸಿಕೊಂಡು 12 ಜನರ ಹೆಸರುಗಳನ್ನು ಪಟ್ಟಿಯಿಂದ ತೆಗೆಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಸಂಬಂಧಪಟ್ಟವರು ಅದನ್ನು ಖಂಡಿಸಿದ್ದಾರೆ.

ಅಚ್ಚರಿಯ ಅಂಶಗಳು

  • ಒಟ್ಟಿನಲ್ಲಿ ಆಳಂದದಲ್ಲಿ 6018 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.

  • ಎಲ್ಲಾ ಹೆಸರುಗಳನ್ನು ಕರ್ನಾಟಕದ ಒಂದೇ ಮೊಬೈಲ್ ಸಂಖ್ಯೆಯಿಂದ ತೆಗೆಸಲಾಗಿದೆ.

  • ಆದರೆ ಆ ಮೊಬೈಲ್ ಸಂಖ್ಯೆ ಯಾರದು ಮತ್ತು ಒಟಿಪಿ ಎಲ್ಲಿ ಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

“ಪ್ರತಿ ಚುನಾವಣೆ ಸಮಯದಲ್ಲೂ ಮತಗಳ್ಳತನದ ಬಗ್ಗೆ ದೂರುಗಳು ಬರುತ್ತಿವೆ. ನಾವು ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸಬೇಕಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow