Rashmika Mandanna: ಅನಿಮಲ್, ಪುಷ್ಪ 2, ಛಾವಾ ಬ್ಲಾಕ್ಬಸ್ಟರ್: ಲಕ್ಷುರಿ ಕಾರು ಖರೀದಿಸಿದ ರಶ್ಮಿಕಾ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಸಾಲು ಸಾಲು ಸಿನಿಮಾ ಆಫರ್ಗಳು ಶ್ರೀವಲ್ಲಿ ಕೈ ಸೇರಿದೆ. ಫುಲ್ ಬ್ಯುಸಿ ಆಗಿರೋ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ರಶ್ಮಿಕಾ ಮಂದಣ್ಣ ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗಿನಲ್ಲಿ ಹಿಟ್ ಸಿನಿಮಾಗಳೊಂದಿಗೆ ರಶ್ಮಿಕಾ ಮಂದಣ್ಣ ಬಾಲಿವುಡ್ಗೆ ಹಾರಿದ್ರು. ಇದೀಗ ಟಾಲಿವುಡ್, ಬಾಲಿವುಡ್ನಲ್ಲಿ ಸಖತ್ ಬ್ಯುಸಿ ನಟಿಯಾಗಿದ್ದಾರೆ.
ಇದರ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ತಮಗಾಗಿ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಮರ್ಸಿಡೀಸ್ ಎಸ್ 450 ಕಾರನ್ನು ಖರೀದಿ ಮಾಡಿದ್ದಾರೆ. ರಶ್ಮಿಕಾರ ಇಷ್ಟದ ಬಣ್ಣವಾದ ಕಪ್ಪು ಬಣ್ಣದ ಕಾರನ್ನೇ ರಶ್ಮಿಕಾ ಖರೀದಿ ಮಾಡಿದ್ದು, ಸೆಡಾನ್ ಮಾದರಿಯ ಕಾರು ಇದಾಗಿದೆ.
ಅಂದಹಾಗೆ ಮರ್ಸಿಡೀಸ್ ಎಸ್ 450 ಕಾರಿನ ಬೆಲೆ ಸುಮಾರು 2.25 ಕೋಟಿ ರೂಪಾಯಿಗಳಿವೆ. ಈ ಐಶಾರಾಮಿ ಕಾರಿನಲ್ಲಿ ಹಲವು ಅತ್ಯುತ್ತಮ ಸೌಲಭ್ಯಗಳು, ಸೌಕರ್ಯಗಳು ಹಾಗೂ ಸೇಫ್ಟಿ ಫೀಚರ್ಸ್ ಬರುತ್ತವೆ. ಜೊತೆಗೆ ಒಂದು ಸುಖಕರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ ಈ ಕಾರು ಅದೇ ಕಾರಣಕ್ಕೆ ರಶ್ಮಿಕಾ ಈ ಕಾರು ಖರೀದಿ ಮಾಡಿದ್ದಾರೆ.
ಈ ಐಶಾರಾಮಿ ಕಾರಿನಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನವಿದೆ. ಆರಾಮದಾಯಕ ಪ್ರಯಾಣಕ್ಕೆ ಸೀಟ್ ರಿಕ್ಲೈನರ್, ಇನ್ಬಿಲ್ಟ್ ಫ್ರಿಡ್ಜ್, ಹಿಂದಿನ ಸೀಟಿಗೆ ಟಿವಿ, ವಿಶಾಲವಾದ ಲೆಗ್ ರೂಂ, ಆಟೋಮ್ಯಾಟಿಕ್ ಡೋರ್ಗಳು, ಅತ್ಯುತ್ತಮ ಭದ್ರತೆ, ಹೀಟೆಡ್, ವೆಂಟಿಲೇಟೆಡ್ ಸೀಟ್ಗಳು ಇನ್ನೂ ಹಲವು ಅತ್ಯುತ್ತಮ ಸೌಲಭ್ಯಗಳು ಈ ಐಶಾರಾಮಿ ಕಾರಿನಲ್ಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






