ಬೆವರಿನ ಕೆಟ್ಟ ಸ್ಮೆಲ್ ನಿಮ್ಮನ್ನು ಮುಜುಗರಕ್ಕೀಡು ಮಾಡ್ತಿದ್ಯಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಸೆಪ್ಟೆಂಬರ್ 20, 2025 - 07:01
 0  17
ಬೆವರಿನ ಕೆಟ್ಟ ಸ್ಮೆಲ್ ನಿಮ್ಮನ್ನು ಮುಜುಗರಕ್ಕೀಡು ಮಾಡ್ತಿದ್ಯಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ದೇಹ ಬೆವರುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅತಿಯಾದ ಬೆವರು, ವಾಸನೆಯುಕ್ತ ಬೆವರು ಒಳ್ಳೆಯದಲ್ಲ. ದೇಹದಲ್ಲಿನ ಯಾವುದಾದರೂ ಅಂಶದ ಕೊರತೆ ಅಥವಾ ಅನಾರೋಗ್ಯದ ಮುನ್ಸೂಚನೆಯಾಗಿ ಅತಿಯಾಗಿ ಬೆವರುತ್ತದೆ. ಕೆಲವೊಮ್ಮೆ ಉಷ್ಣತೆ ಹೆಚ್ಚಾಗಿದ್ದರೂ ಕೂಡ ದೇಹ ಬೆವರಿನ ಮೂಲಕ ತಂಪಾಗಿರುವಂತೆ ಮಾಡುತ್ತದೆ.

ಇನ್ನು ಕೆಲವರಲ್ಲಿ ಬೆವರು ಹೆಚ್ಚು ದುರ್ಗಂಧವನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಬೆವರಿನ ಝಳಕ್ಕೆ ಬೆವರುವುದ ಸಹಜ. ಅದರಿಂದ ಸಾಕಷ್ಟು ಇನ್ನಿತರ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಬೆವರಿನ ಗುಳ್ಳೆಗಳು, ತುರಿಕೆಯಂತಹ ಕಿರಿಕಿರಿ ಕಾಡಬಹುದು. ಅದಕ್ಕಾಗ ಸ್ವಚ್ಛತೆ ಅಗತ್ಯ. ಅದೆಲ್ಲದರ ಜೊತೆಗೆ ಕೆಲವು ಬ್ಯಾಕ್ಟೀರಿಯಾಗಳಿಂದ ದೇಹದ ಬೆವರು ವಾಸನೆಯಾಗುತ್ತದೆ. ಪ್ರತಿಯೊಬ್ಬರ ದೇಹದಿಂದ ಹೊರಸೂಸುವ ಬೆವರು ಕೂಡ ವಿಭಿನ್ನವಾಗಿರುತ್ತದೆ

ಕೆಲವರ ಬೆವರಿದಾಗ  ಕೆಟ್ಟ ವಾಸನೆಯನ್ನು ಬೀರುತ್ತಾರೆ, ಹೀಗಾಗಿ ಎಲ್ಲರ ಮುಂದೆ ಅಪ್ಪಿಕೊಳ್ಳಲು, ಕೈ ಮೇಲೆತ್ತಲು ಮುಜುಗರ ಆಗುವುದು ಸಹಜ. ಆದರೆ ಹೆಚ್ಚಿನವರು ಬೆವರಿನಿಂದ  ಹಾಗೂ ದುರ್ನಾತದಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ರೀತಿಯ ಕ್ರಮಗಳನ್ನು, ದುಬಾರಿ ಸುಗಂಧಗಳನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಸುಲಭ ಪರಿಹಾರವನ್ನು ಕೇವಲ 20 ರೂಪಾಯಿಗಳಲ್ಲಿ ಮಾಡಬಹುದು. ಈ ವಸ್ತುವಿನಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ವಾಸನೆಯನ್ನು ನಿವಾರಿಸುವುದಲ್ಲದೇ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ.

ಸ್ಪಟಿಕ:
ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸ್ಪಟಿಕದಲ್ಲಿ ಕಂಡುಬರುತ್ತವೆ. ಇದು ದೇಹದಲ್ಲಿ ಬೆವರಿನಿಂದ ಉಂಟಾಗುವ ವಾಸನೆಯನ್ನು ಹಾಗೂ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರ ಸಂಕೋಚಕ ಗುಣಗಳು ಚರ್ಮದ ರಂಧ್ರಗಳನ್ನು ಕುಗ್ಗಿಸುತ್ತವೆ, ಜತೆಗೆ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.

ಸ್ಪಟಿಕವನ್ನು ಹೇಗೆ ಬಳಸುವುದು?
ಸ್ನಾನ ಮಾಡುವಾಗ: ಸ್ನಾನದ ನೀರಿನಲ್ಲಿ ಒಂದು ಸಣ್ಣ ತುಂಡು ಸ್ಪಟಿಕವನ್ನು ಹಾಕಿ ಕರಗಲು ಬಿಡಿ ಮತ್ತು ನಂತರ ಅದೇ ನೀರಿನಿಂದ ಸ್ನಾನ ಮಾಡಿ. ಇದು ಇಡೀ ದೇಹದಿಂದ ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ.
ನೇರ ಬಳಕೆ: ಸ್ಪಟಿಕವನ್ನು ಸ್ವಲ್ಪ ತೇವಗೊಳಿಸಿ ಕಂಕುಳ ಅಥವಾ ಪಾದಗಳ ಮೇಲೆ ಉಜ್ಜಿಕೊಳ್ಳಿ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ , ಅದರ ಬೇರುಗಳಿಂದ ಬರುವ ಕೆಟ್ಟ ವಾಸನೆಯನ್ನು ನಿವಾರಿಸುತ್ತದೆ.
ಪುಡಿ: ಸ್ಪಟಿಕವನ್ನು ಪುಡಿ ಪುಡಿ ಮಾಡಿ, ಅತಿಯಾದ ಬೆವರು ಇರುವ ಪ್ರದೇಶಗಳಿಗೆ ಹಚ್ಚಿ.

ಇದರ ಪ್ರಯೋಜಗಳು:

ಇದು ಅಗ್ಗದ ಮತ್ತು ಸುಲಭವಾಗಿ ಲಭ್ಯವಿರುವ ವಸ್ತು.

ಇದು ರಾಸಾಯನಿಕ ಮುಕ್ತವಾಗಿದ್ದು ಚರ್ಮಕ್ಕೆ ಹಾನಿ ಮಾಡುವುದಿಲ್ಲ.

ದೀರ್ಘಕಾಲದವರೆಗೆ ಪರಿಣಾಮಕಾರಿಯಾಗಿರುತ್ತದೆ.

ಬೆವರಿನ ವಾಸನೆಯನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮನ್ನು ತಾಜಾತನದಿಂದ ಇರುವಂತೆ ಮಾಡುತ್ತದೆ.

ದುಬಾರಿ ಸುಗಂಧ ದ್ರವ್ಯಗಳು ಮತ್ತು ಡಿಯೋಗಳು ಕೆಲವು ಗಂಟೆಗಳ ಕಾಲ ಮಾತ್ರ ಪರಿಮಳವನ್ನು ನೀಡುತ್ತವೆ. ಆದರೆ ಯಾವುದೇ ಬ್ಯಾಕ್ಟೀರಿಯಾವನ್ನು ನಿವಾರಿಸುವುದಿಲ್ಲ. ಸ್ಪಟಿಕವು ಬಜೆಟ್ ಸ್ನೇಹಿ ಮಾತ್ರವಲ್ಲದೇ ಸಮಸ್ಯೆಗೆ ಸುಲಭವಾಗಿ ಪರಿಹಾರವನ್ನು ನೀಡುತ್ತದೆ. ಅದಕ್ಕಾಗಿಯೇ ಇಂದಿಗೂ ಹಳ್ಳಿಗಳಲ್ಲಿ ಜನರು ಇದನ್ನು ದೇಹದ ಆರೈಕೆಯಲ್ಲಿ ಬಳಸುತ್ತಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow