BBK11: ಇಂದು ಕಿಚ್ಚನ ಪಂಚಾಯತಿ! ಯಾರಿಗೆಲ್ಲಾ ಕ್ಲಾಸ್? ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸ್?

ಬಿಗ್ ಬಾಸ್ ಸೀಸನ್ 11ರ ಮನೆಯಲ್ಲಿರುವ ಪೈಕಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಈ ವಾರ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಲಿಸ್ಟ್ನಲ್ಲಿ ಇದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಧನರಾಜ್ ಅವರಿಗೆ ಎಲಿಮಿನೇಟ್ ಆಗುವ ಭಯ ಹೆಚ್ಚಿದೆ.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 12ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಹೌದು, ಪ್ರತಿ ವಾರದಂತೆ ಈ ಬಾರಿಯೂ ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಇನ್ನೂ ಈ 8 ಮಂದಿ ಪೈಕಿ ಈ ವಾರ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಆದರೆ ಇದರ ಮಧ್ಯೆ ಕಳೆದ ವಾರ ಯಾವ ಸ್ಪರ್ಧಿ ಎಲಿಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ಡಬಲ್ ಎಲಿಮಿನೇಷನ್ ಇರುತ್ತಾ? ಅಥವಾ ಕೊನೆಯ ಕ್ಷಣದಲ್ಲಿ ಮತ್ತೆ ಬಿಗ್ಬಾಸ್ ಟ್ವಿಸ್ಟ್ ಕೊಡಲಿದ್ದಾರಾ ಅಂತ ತಿಳಿದು ಬರಲಿದೆ.
ನೋಡ ನೋಡುತ್ತಿದ್ದಂತೆ ಬಿಗ್ಬಾಸ್ ಸೀಸನ್ 11, 75ನೇ ದಿನಕ್ಕೆ ಕಲಿಟ್ಟಿದೆ. ಶನಿವಾರದ ಪಂಜಾಯ್ತಿಗೆ ಕಿಚ್ಚ ಸುದೀಪ ಎಂಟ್ರಿಗಾಗಿ ಅಭಿಮಾನಿಗಳು ಹಾಗೂ ಸ್ಪರ್ಧಿಗಳು ಕಾಯುತ್ತಿದ್ದಾರೆ. ಈ ವಾರ ಸೇಫ್ ಆಗಿರೋ ಸ್ಪರ್ಧಿಗಳ ಹೆಸರನ್ನು ಕಿಚ್ಚ ಸುದೀಪ್ ಘೋಷಣೆ ಮಾಡಲಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಓರ್ವ ಸ್ಪರ್ಧಿಯನ್ನು ಬಿಗ್ಬಾಸ್ ಮನೆಯಿಂದ ಆಚೆ ಕಳುಹಿಸಲಿದ್ದಾರೆ.
ಈ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಗೆಳತಿ.. ಗೆಳತಿ ಅಂದುಕೊಂಡಿದ್ದ ಮಂಜು ಹಾಗೂ ಗೌತಮಿ ಮಧ್ಯೆ ಬಿರುಕು ಮೂಡಿದೆ. ಮತ್ತೊಂದು ಕಡೆ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಏಕಾಏಕಿ ಧನರಾಜ್ ಆಚಾರ್ಯ ಮೇಲೆ ಕೈ ಮಾಡಲು ಹೋಗಿದ್ದರು. ಕಳೆದ ವಾರ ನಾಮಿನೇಷನ್ನಿಂದ ಸೇಫ್ ಆಗಿದ್ದ ಚೈತ್ರಾ ಕುಂದಾಪುರ ಈ ಬಾರಿ ಏನಾಗ್ತಾರೆ ಅಂತ ಇಂದಿನ ವಾರದ ಕತೆ ಕಿಚ್ಚನ ಪಂಜಾಯ್ತಿಯಲ್ಲಿ ತಿಳಿದು ಬರಲಿದೆ. ಅಲ್ಲದೇ ಕಿಚ್ಚ ಸುದೀಪ್ ತಮ್ಮ ಪಂಚಾಯ್ತಿಯಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಾರೆ. ಹಾಗೆಯೇ ತಪ್ಪು ಮಾಡಿದ ಯಾವ ಸ್ಪರ್ಧಿಗೆ ಕ್ಲಾಸ್ ತೆಗೆದುಕೊಳ್ತಾರೆ ಅಂತಾ ತಿಳಿದುಕೊಳ್ಳಲು ವೀಕ್ಷಕರು ಎಕ್ಸೈಟ್ ಆಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






