BBK11: ಐಶುಗೆ ಸಿಹಿ ಮುತ್ತು ಕೊಟ್ಟ ಶಿಶಿರ್: ನಾಚಿ ನೀರಾದ ಜೋಡಿ!

ಮಗ್ಗು, ಒಂದು ಬೆಡ್ ಶೀಟ್, ಇಬ್ಬರೂ ಹೊದ್ದುಕೊಂದು ಫುಲ್ ರೊಮ್ಯಾಂಟಿಕ್ ಮೂಡ್ ನಲ್ಲಿದ್ದರು. ಅಬ್ಬಬ್ಬಾ ಈ ಇಬ್ಬರ ರೊಮ್ಯಾನ್ಸ್ ಗೆ ಮನೆ ಮಂದಿ ಫಿದಾ ಆಗಿದ್ದಾರೆ. ಎಸ್ ನಾವು ಹೇಳುತ್ತಿರೋದು ಬಿಗ್ ಬಾಸ್ ಸೀಸನ್ 11ರ ಕಂಟಸ್ಟಂಟ್ ಗಳಾದ ಶಿಶಿರ್ ಹಾಗೂ ಐಶ್ವರ್ಯ ಬಗ್ಗೆ.
ಐಶ್ವರ್ಯಾ ಹಾಗೂ ಶಿಶಿರ್ ಒಂದೇ ಬೆಡ್ಶೀಟ್ ಹೊತ್ತು ಕುಳಿತಿದ್ದಾರೆ. ಐಶ್ವರ್ಯಾ ಅವರ ಕೈಯಲ್ಲಿ ಕಪ್ ಇತ್ತು. ಅದರಲ್ಲಿ ಇದ್ದ ಬಿಸಿ ಕಾಫಿಯನ್ನು ಒಬ್ಬರಾದ ಬಳಿಕ ಒಬ್ಬರು ಹೀರಿದ್ದಾರೆ. ಅಕ್ಟೋಬರ್ 18ರ ಎಪಿಸೋಡ್ನಲ್ಲಿ ಈ ದೃಶ್ಯಗಳು ಹೈಲೈಟ್ ಆಗಿದೆ.
ಐಶ್ವರ್ಯಾ ಅವರಿಗೆ ಶಿಶಿರ್ ಅಂತರ ಇಟ್ಟುಕೊಂಡು ಕಿಸ್ ಕೊಟ್ಟಿದ್ದಾರೆ. ಇದರಿಂದ ಇವರು ಕ್ಲೋಸ್ ಆದರೇ ಎನ್ನುವ ಪ್ರಶ್ನೆ ಮೂಡಿದೆ. ಇಬ್ಬರೂ ರಿಯಲ್ ಲೈಫ್ನಲ್ಲಿ ಸಿಂಗಲ್ ಆಗಿದ್ದಾರೆ. ಹೀಗಾಗಿ, ಬಿಗ್ ಬಾಸ್ನಲ್ಲಿ ಇವರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಐಶ್ವರ್ಯಾ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದಾಗ ಮೊದಲು ಧರ್ಮ ಜೊತೆ ಕ್ಲೋಸ್ ಆಗೋಕೆ ಬಯಿಸಿದ್ದರು. ಆದರೆ, ಇದಕ್ಕೆ ಅನುಷಾ ರೈ ಅವಕಾಶ ನೀಡಿರಲಿಲ್ಲ. ಹೀಗಿರುವಾಗಲೇ ಶಿಶಿರ್ ಹಾಗೂ ಐಶ್ವರ್ಯಾ ಕ್ಲೋಸ್ ಆಗಿದ್ದಾರೆ.
ಹೈಲೈಟ್ ಆಗಬೇಕು ಎನ್ನುವ ಕಾರಣಕ್ಕೆ ಕೆಲವೊಮ್ಮೆ ಲವ್ ನಾಟಕ ಆಡೋದು ಇದೆ. ‘ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡಿರೋದು ಈಗ ಅಂಥದ್ದೇ ಪ್ರೀತಿಯೇ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






