BECIL Recruitment: ಸರ್ಕಾರಿ ಸ್ವಾಮ್ಯದ BECIL ನಲ್ಲಿ ಖಾಲಿ ಇರುವ ಹುದ್ದೆಗೆ ಇಂದೇ ಅರ್ಜಿ ಹಾಕಿ..!

ಜುಲೈ 29, 2025 - 08:18
 0  9
BECIL Recruitment: ಸರ್ಕಾರಿ ಸ್ವಾಮ್ಯದ BECIL ನಲ್ಲಿ ಖಾಲಿ ಇರುವ ಹುದ್ದೆಗೆ ಇಂದೇ ಅರ್ಜಿ ಹಾಕಿ..!

ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಸಹಾಯಕ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್, ಭದ್ರತಾ ಅಧಿಕಾರಿ, ಮೆಕ್ಯಾನಿಕ್, ಚಾಲಕ ಸೇರಿದಂತೆ ಒಟ್ಟು 31 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಅರ್ಜಿ ಸಲ್ಲಿಸಲು: BECIL ಅಧಿಕೃತ ವೆಬ್ಸೈಟ್ becil.com ಗೆ ಭೇಟಿ ನೀಡಿ, ಜುಲೈ 30ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು:

ಸಹಾಯಕ ಎಂಜಿನಿಯರ್ ಹುದ್ದೆಗೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಸಿವಿಲ್ ಎಂಜಿನಿಯರಿಂಗ್ ಪದವಿ.

ಮೆಕ್ಯಾನಿಕ್ ಹುದ್ದೆಗೆ: ಕನಿಷ್ಠ ಐಟಿಐ ಪ್ರಮಾಣಪತ್ರ.

ಚಾಲಕ, ಡಿಸೆಕ್ಷನ್ ಹಾಲ್ ಅಟೆಂಡೆಂಟ್ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳಿಗೆ: 10ನೇ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.

ಸಾಮಾನ್ಯ ಪದವಿ ಪಡೆದ ಅಭ್ಯರ್ಥಿಗಳು ಇತರ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು.

ಸಂಬಳ: ಹುದ್ದೆ ಮತ್ತು ಅರ್ಹತೆಯ ಆಧಾರದ ಮೇಲೆ ₹19,900 ರಿಂದ ₹56,100/- ಪ್ರತಿ ತಿಂಗಳು ಸಂಬಳ.

ಅರ್ಜೀ ಶುಲ್ಕ:

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್: ₹259

ಎಸ್ಸಿ, ಎಸ್ಟಿ, ದಿವ್ಯಾಂಗ: ಶುಲ್ಕ ಮನ್ನಾ

ಪಾವತಿ ಆನ್ಲೈನ್ ಮೂಲಕ ಮಾತ್ರ.

ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು BECIL ಅಧಿಕೃತ ತಾಣ ಭೇಟಿನೀಡಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow