Bengaluru: ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ: ಪತ್ರ ಬರೆದು ವಿದ್ಯಾರ್ಥಿ ನಾಪತ್ತೆ!

ಜನವರಿ 25, 2025 - 22:17
 0  18
Bengaluru: ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ: ಪತ್ರ ಬರೆದು ವಿದ್ಯಾರ್ಥಿ ನಾಪತ್ತೆ!

ನಾನು ವಿಷ್ಣು ಮಗ ನನ್ನನ್ನು ಹುಡುಕಬೇಡಿ ಅಂತಾ ಪತ್ರ ಬರೆದು ಬೆಂಗಳೂರಿನ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ಮೋಹಿತ್ ಋಷಿ ನಾಪತ್ತೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ವಿದ್ಯಾರಣ್ಯಪುರದ ನಿವಾಸಿ ಅರ್ಜುನ್ ಕುಮಾರ್ ಎಂಬುವವರ ಪುತ್ರ ಮೋಹಿತ್ ಋಷಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಎಂದು ತಿಳಿದು ಬಂದಿದೆ.

ಮನೆ ಬಿಟ್ಟು ಹೋಗುವ ಮುನ್ನ “ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದೇನೆ. ನಾನು ವಿಷ್ಣುವಿನ ಮಗ ನನ್ನ ಹುಡುಕಲು ಪ್ರಯತ್ನ ಪಡಬೇಡಿ. ಜಗತ್ತಿನ ಜನರ ಕಲ್ಯಾಣಕ್ಕಾಗಿ ದೇವರು ನನ್ನನ್ನ ಆರಿಸಿಕೊಂಡಿದ್ದಾನೆ.

 ಈ ರಾಜಜೀವನವನ್ನ ತೊರೆದು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದಾನೆ” ಎಂದು ಪತ್ರ ಬರೆದಿಟ್ಟು ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಪುತ್ರ ನಾಪತ್ತೆಯಾಗಿರುವ ಬಗ್ಗೆ ಮೋಹಿತ್​ ಋಷಿಯ ತಂದೆ ಅರ್ಜುನ್ ಕುಮಾರ್ ಕೊಡಿಗೇಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow