ದಳಪತಿ ವಿಜಯ್ ನಟನೆಯ ಕೊನೇ ಸಿನಿಮಾ 'ಜನ ನಾಯಗನ್' ರಿಲೀಸ್ ಡೇಟ್‌ ಫಿಕ್ಸ್.!

ಮಾರ್ಚ್ 25, 2025 - 20:00
 0  15
ದಳಪತಿ ವಿಜಯ್ ನಟನೆಯ ಕೊನೇ ಸಿನಿಮಾ 'ಜನ ನಾಯಗನ್' ರಿಲೀಸ್ ಡೇಟ್‌ ಫಿಕ್ಸ್.!

ದಳಪತಿ ವಿಜಯ್ ತಮ್ಮ 69 ನೇ ಚಿತ್ರದ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಈಗಾಗಲೇ ರಾಜಕೀಯದಲ್ಲಿ ಬ್ಯುಸಿಯಾಗಿರುವ ವಿಜಯ್ ಗೆ ಇದು ಕೊನೆಯ ಚಿತ್ರ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಭಾರಿ ಬಜೆಟ್‌ನಲ್ಲಿ ಮತ್ತು ಅತ್ಯಂತ ಪ್ರತಿಷ್ಠಿತ ರೀತಿಯಲ್ಲಿ ನಿರ್ಮಿಸುತ್ತಿದೆ. ಅನಿರುದ್ಧ್ ಸಂಗೀತ ಸಂಯೋಜಿಸುತ್ತಿದ್ದಾರೆ.

ದಳಪತಿ ವಿಜಯ್ ಅವರ 'ಜನ ನಾಯಗನ್' ಚಿತ್ರ 2026 ರ ಜನವರಿಯಲ್ಲಿ ಬಿಡುಗಡೆಯಾಗಲಿದೆ.. ಕೊನೆಗೂ ವಿಜಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ವಿಜಯ್ ಕೊನೆಯ ಚಿತ್ರ ಮುಂದಿನ ವರ್ಷ ಜನವರಿ 9ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಅಪ್‌ಡೇಟ್‌ ಹಂಚಿಕೊಂಡಿದೆ. ಸಂಕ್ರಾಂತಿ ಹಬ್ಬದ ಸಡಗರದ ನಡುವೆ ವಿಜಯ್‌ ಕೊನೆಯ ಚಿತ್ರದ ಅಬ್ಬರ ಕೂಡ ಇರಲಿದೆ.

ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ‘ಜನ ನಾಯಗನ್‌’ ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರವಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್‌ನಿಂದ ಕುತೂಹಲ ಮೂಡಿಸಿದೆ. ‘ಬೀಸ್ಟ್‌’ ಚಿತ್ರದ ನಂತರ ‘ಜನ ನಾಯಗನ್‌’ ಚಿತ್ರದ ಮೂಲಕ 2ನೇ ಬಾರಿ ವಿಜಯ್ ಮತ್ತು ಪೂಜಾ ಹೆಗ್ಡೆ (Pooja Hegde) ಜೊತೆಯಾಗ್ತಿದ್ದಾರೆ.

ಇನ್ನೂ ಈ ಚಿತ್ರದ ಬಳಿಕ ಮತ್ತೆ ತಾವು ನಟಿಸುವುದಿಲ್ಲ. ರಾಜಕೀಯದಲ್ಲಿ ಇರೋದಾಗಿ ವಿಜಯ್ ಈಗಾಗಲೇ ತಿಳಿಸಿದ್ದಾರೆ. ಹಾಗಾಗಿ ನಟನ ಕೊನೆಯ ಸಿನಿಮಾ ಸಂಭ್ರಮಿಸಲು ಫ್ಯಾನ್ಸ್ ಕಾಯ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow