Bigg Boss 12: ಮೊದಲ ದಿನವೇ ಬಿಗ್ ಶಾಕ್: ದೊಡ್ಮನೆಯಿಂದ ಒರ್ವ ಸ್ಪರ್ಧಿ ಔಟ್..?
ಬಿಗ್ ಬಾಸ್ ಕನ್ನಡ ಸೀಸನ್ 12’ ಅದ್ದೂರಿಯಾಗಿ ಓಪನ್ ಆಗಿದೆ. ಕಿಚ್ಚ ಸುದೀಪ್ ಅವರು ಈ ಶೋನ ನಡೆಸಿಕೊಟ್ಟಿದ್ದಾರೆ. ಈ ಶೋಗೆ ಒಟ್ಟೂ 19 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ 12ನೇ ಸೀಸನ್ ಹಿಂದಿನ ಎಲ್ಲ ಸೀಸನ್ಗಳಿಗಿಂತ ಅದ್ಭುತವಾಗಿ ಮೂಡಿಬರುವ ನಿರೀಕ್ಷೆಯಿದ್ದು, ಮೊದಲ ದಿನವೇ ಎಂಟ್ರಿ ಆಗುತ್ತಲೇ ಒಬ್ಬ ಸ್ಪರ್ಧಿಯ ಎಲಿಮಿನೇಶನ್ ಪ್ರಕ್ರಿಯೆ ಪ್ರಾರಂಭವಾಗಿದೆ. ಯಾವ ಸ್ಪರ್ಧಿಯು ಹೊರಗಡೆ ಹೋಗುತ್ತಾರೆಯೆಂಬುದು ಮೊದಲ ಸಂಚಿಕೆಯ ಪ್ರಸಾರದಲ್ಲಿ ನಿರ್ಧಾರವಾಗಲಿದೆ.
ಬಿಗ್ ಬಾಸ್ ತಂಡವು ಮೊದಲ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ಪ್ರೋಮೋದಲ್ಲಿ “ಹಾಯ್ ಹೇಳೋಕೂ ಮುನ್ನವೇ ಟಾಟಾ-ಬಾಯ್ ಹೇಳೋದು ಯಾರು? ಬಿಗ್ ಬಾಸ್, ಸೋಮ-ಶುಕ್ರ ರಾತ್ರಿ 9:30, ಶನಿ-ಭಾನು ರಾತ್ರಿ 9ಕ್ಕೆ” ಎಂಬ ಕ್ಯಾಪ್ಷನ್ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.
ಇದು ಬಿಗ್ ಬಾಸ್ ಎಂದು ಪ್ರೋಮೋ ಪ್ರಾರಂಭಗೊಂಡಿದೆ. ಮನೆಗೆ ಬಂದ ಮೊದಲ ದಿನವೇ ಭರ್ಜರಿ ಟ್ವಿಸ್ಟ್ ಎಂಬ ಹಿನ್ನೆಲೆ ದನಿ ಕೇಳಿ ಬಂದಿದೆ. ನಾನು ಬಂದಿರೋ ಉದ್ದೇಶ ಸ್ವಾಗತ ಮಾಡೋದಕ್ಕಲ್ಲ. ನಿಮ್ಮಲ್ಲಿ ಒಬ್ರಿಗೆ ವಿದಾಯ ಹೇಳೋದಿಕ್ಕೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ಪರಸ್ಪರ ಚರ್ಚಿಸಿ, ಒಬ್ಬರಿಗೆ ಮುಖ್ಯದ್ವಾರ ತೋರಿಸಿ ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ನಂತರ, ಸ್ಪರ್ಧಿಗಳು ಚರ್ಚಿಸಿದ್ದಾರೆ. ಕೊನೆಗೆ ಒಬ್ಬರಿಗೆ ಗುಡ್ ಬೈ ಎಂದು ಬಿಗ್ ಬಾಸ್ ತಿಳಿಸಿದ್ದು, ಮನೆಯ ಮುಖ್ಯದ್ವಾರ ತೆರೆದಿದೆ. ಅಲ್ಲಿಗೆ ಒಬ್ಬರು ಹೋಗೋದು ಬಹುತೇಕ ಖಚಿತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?