Bigg Boss Kannada: ಕಾದಿದ್ದು ಸಾಕು..ಬಿಗ್ ಬಾಸ್ ಈಸ್ ಬ್ಯಾಕ್..! “Bigg Boss” ಲೋಗೋ ಲಾಂಚ್
ಜನಪ್ರಿಯ ರಿಯಾಲಿಟಿ ಶೋ 'ಬಿಗ್ಬಾಸ್ ಕನ್ನಡ ಸೀಸನ್ 12' ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ. ಕಲರ್ಸ್ ಕನ್ನಡ ವಾಹಿನಿ ಈ ಹೊಸ ಸೀಸನ್ಗೆ ಸಂಬಂಧಿಸಿದಂತೆ ಮೊದಲ ಪ್ರೋಮೊ ಬಿಡುಗಡೆಯನ್ನು ಮಾಡಿದ್ದು, ‘ಕಾದಿದ್ದು ಸಾಕು, ಬಿಗ್ಬಾಸ್ ಈಸ್ ಬ್ಯಾಕ್’ ಎಂಬ ಶೀರ್ಷಿಕೆಯಲ್ಲಿ ಪ್ರೋಮೊ ಪ್ರಸಾರವಾಗಿದೆ.
ಈ ಪ್ರೋಮೊನಲ್ಲಿ ಬಿಗ್ಬಾಸ್ ಲೋಗೋನ ರಿವೀಲ್ ಮಾತ್ರವಿದ್ದು, ನಿರೂಪಕ ಕಿಚ್ಚ ಸುದೀಪ್ ಪ್ರಸ್ತುತವಾಗಿ ಕಾಣಿಸಿಕೊಂಡಿಲ್ಲ. ಆದರೆ ಮತ್ತೊಂದು ಘೋಷಣೆಯಲ್ಲಿ, ಈ ಬಾರಿ ಸುದೀಪ್ ಅವರೇ ನಿರೂಪಕನಾಗಿ ಮುಂದುವರಿಯುತ್ತಿದ್ದಾರೆ ಎಂಬುದು ದೃಢವಾಗಿದೆ.
ಸೀಸನ್ 11 ಸಂದರ್ಭದಲ್ಲಿ, ಸುದೀಪ್ ಅವರು ಬಿಗ್ಬಾಸ್ ನಿರೂಪಣೆಯಿಂದ ಹಿಂದೆ ಸರಿಯಲಿದ್ದಾರೆ ಎಂದು ಹೇಳಿದ್ದರು. ಆದರೆ, ಪ್ರೇಕ್ಷಕರ ಒತ್ತಾಯ ಹಾಗೂ ಆಯೋಜಕರ ಮನವೊಲಿಕೆಯಿಂದ ಅವರು ಮತ್ತೆ ನಿರೂಪಕನಾಗುತ್ತಿದ್ದಾರೆ.
ವಾಹಿನಿಯ ಪ್ರಕಾರ, ಸುದೀಪ್ ಅವರು ಶೀಘ್ರದಲ್ಲಿಯೇ ಪ್ರೋಮೊ ಶೂಟ್ನಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಬಿಗ್ಬಾಸ್ ಶೋಗಳು ತಮ್ಮ ತಮ್ಮ ಭಾಷೆಗಳಲ್ಲಿ ಆರಂಭವಾಗುತ್ತಿದ್ದಂತೆಯೇ ಕನ್ನಡದ ಬಿಗ್ಬಾಸ್ ಕೂಡ ಪ್ರಾರಂಭವಾಗಲಿದೆ ಎಂಬ ನಿರೀಕ್ಷೆ ಮನೆ ಮಾಡಿದೆ.
ನಿಮ್ಮ ಪ್ರತಿಕ್ರಿಯೆ ಏನು?