Blue Tea: ಪ್ರತಿದಿನ ಬೆಳಿಗ್ಗೆ ಈ ಟೀ ಕುಡಿಯುವುದರಿಂದ ಸುಗರ್ ಲೆವೆಲ್ ಕಂಟ್ರೋಲ್ ಆಗುತ್ತೆ..!

ಶಂಖಪುಷ್ಪ ಹೂವಿನ ಹೆಸರು ಬಹುಪಾಲು ಜನರಿಗೆ ದೇವಪೂಜೆಯ ಮೂಲಕ ಪರಿಚಿತವಾಗಿದೆ. ಆದರೆ ಇತ್ತೀಚೆಗೆ, ಈ ಹೂವಿನಿಂದ ತಯಾರಾಗುವ ಬ್ಲೂ ಟೀ ಅಥವಾ ನೀಲಿ ಚಹಾ ಆರೋಗ್ಯ ಪ್ರೇಮಿಗಳಲ್ಲಿ ಭಾರಿ ಜನಪ್ರಿಯತೆ ಪಡೆದಿದೆ. ಆಯುರ್ವೇದದ ಪ್ರಕಾರ ಇದು ಶ್ರೇಷ್ಠ ಔಷಧೀಯ ಗುಣಗಳನ್ನು ಹೊಂದಿದ್ದು,
ಈಗ ದಿನನಿತ್ಯದ ಉಪಯೋಗದಲ್ಲಿ ಕಾಣಿಸಿಕೊಂಡಿದೆ. ಬ್ಲೂ ಟೀ ಎಂದರೆ ಶಂಖಪುಷ್ಪ ಹೂವಿನಿಂದ ತಯಾರಾಗುವ ವಿಶೇಷ ಚಹಾ. ಇದರ ವಿಶಿಷ್ಟ ನೀಲಿ ಬಣ್ಣವೇ ಇದರ ಗುರುತು. ಈ ಹೂವನ್ನು "ಅಪರಾಜಿತ", "ಗಿರಿಕಾರ್ಣಿಕ", "ಡಿಂಟೆನ್" ಎಂಬ ಬೇರೆ ಹೆಸರುಗಳಿಂದಲೂ ಕರೆಯಲಾಗುತ್ತದೆ.
ಆರೋಗ್ಯಕ್ಕೆ ಬ್ಲೂ ಟೀ ನೀಡುವ ಪ್ರಮುಖ ಪ್ರಯೋಜನಗಳು:
ಜೀರ್ಣಕ್ರಿಯೆ ಸುಧಾರಣೆ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ಲೂ ಟೀ ಸೇವನೆ ಮಾಡಿದರೆ, ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಜೀರ್ಣ, ಆಮ್ಲೀಯತೆ ಹಾಗೂ ಮಲಬದ್ಧತೆ ಸಮಸ್ಯೆಗಳಿಗೆ ಇದು ಮನೆಮದ್ದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ತೂಕ ಕಡಿಮೆ ಮಾಡಲು ಸಹಕಾರಿ
ಈ ಚಹಾದಲ್ಲಿನ ಅತ್ಯಂತ ಮುಖ್ಯವಾದ ಅಂಶವೆಂದರೆ — ಇದರಲ್ಲಿ ಕೆಫೀನ್, ಕೊಬ್ಬುಗಳು ಅಥವಾ ಕೊಲೆಸ್ಟ್ರಾಲ್ ಇಲ್ಲ. ಇದರ ಸೇವನೆಯು ಹಸಿವಿನ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಮತ್ತು ಖಾಲಿ ಸಮಯದ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಈ ಮೂಲಕ ತೂಕ ಇಳಿಕೆಗೆ ಸಹಾಯಕವಾಗುತ್ತದೆ.
ಮೆದುಳಿನ ಆರೋಗ್ಯ ಮತ್ತು ಸಕ್ಕರೆ ನಿಯಂತ್ರಣ
ಬ್ಲೂ ಟೀದಲ್ಲಿರುವ ಫೀನಾಲಿಕ್ ಆಮ್ಲಗಳು ಮತ್ತು ಬಯೋಫ್ಲವೊನೈಡ್ಸ್ ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿಯಾಗುತ್ತವೆ. ಇದರ ಆಂಟಿ-ಹೈಪರ್ಗ್ಲೈಸೆಮಿಕ್ ಗುಣಗಳು ಇನ್ಸುಲಿನ್ ನಿಯಂತ್ರಣ ಹಾಗೂ ಗ್ಲೂಕೋಸ್ ಚಯಾಪಚಯವನ್ನು ಸಮತೋಲನದಲ್ಲಿಡುತ್ತವೆ – ಇದರಿಂದ ಸಕ್ಕರೆ ರೋಗಿಗಳಿಗೂ ಇದು ಲಾಭಕರವಾಗಿದೆ. ಹೃದಯ ಮತ್ತು ನರವ್ಯೂಹ ರಕ್ಷಣೆ
ಬ್ಲೂ ಟೀ ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯು ಆಲ್ಝೈಮರ್ ಮತ್ತು ಇತರ ನರವ್ಯೂಹ ಸಂಬಂಧಿತ ಕಾಯಿಲೆಗಳ ವಿರುದ್ಧ ಸಹಾಯಕವಾಗಬಹುದು ಎಂದು ಅಧ್ಯಯನಗಳು ಸೂಚಿಸುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?






