Budget 2025: ದೇಶದಲ್ಲಿ ಇನ್ಮುಂದೆ ಯಾವುದು ಅಗ್ಗ?, ಯಾವುದು ದುಬಾರಿ? ಇಲ್ಲಿದೆ ಮಾಹಿತಿ

ಫೆಬ್ರವರಿ 1, 2025 - 16:00
 0  11
Budget 2025: ದೇಶದಲ್ಲಿ ಇನ್ಮುಂದೆ ಯಾವುದು ಅಗ್ಗ?, ಯಾವುದು ದುಬಾರಿ? ಇಲ್ಲಿದೆ ಮಾಹಿತಿ

ಬೆಂಗಳೂರು: ಕೇಂದ್ರ ಬಜೆಟ್ 2025 ಅನ್ನು ಇಂದು ಫೆಬ್ರುವರಿ 1ರಂದು ಮಂಡನೆ ಮಾಡಲಾಗಿದೆ. ಮುಖ್ಯವಾಗಿ 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ. ಈ ವಿನಾಯಿತಿ ವೇತನ ಪಡೆಯುವ ತೆರಿಗೆದಾರರಿಗೆ ಮಾತ್ರ ಅನ್ವಯವಾಗುತ್ತದೆ. ತಮ್ಮ ಭಾಷಣದಲ್ಲಿ ಸೀತಾರಾಮನ್‌ ಅವರು ಒಟ್ಟು 12.75 ಲಕ್ಷ ರೂ.ಗಳಿಗೆ ವೇತನ ಪಡೆಯುವ ತೆರಿಗೆದಾರರಿಗೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದರು. ಬಜೆಟ್‌ನಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ದುಬಾರಿ ವಸ್ತುಗಳ ಪಟ್ಟಿಯಲ್ಲಿ ಏನೆಲ್ಲ ಸೇರಿವೆ ಎಂಬುದನ್ನು ನೋಡೋಣ.

ಯಾವುದು ಅಗ್ಗ...

  • LED ಟಿವಿ-ಮೊಬೈಲ್
  • ಕ್ಯಾನ್ಸರ್ ಔಷಧಗಳ ಮೇಲಿನ ತೆರಿಗೆ
  • ಮೀನಿನ ಪ್ಲೇಟಿನ ಮೇಲಿನ ತೆರಿಗೆ
  • ಔಷಧಿ ಮತ್ತು ಎಲೆಕ್ಟ್ರಿಕ್ ಕಾರುಗಳು
  • ಎತರ್ನೆಟ್ ಸ್ವಿಚ್ ಮೇಲಿನ ತೆರಿಗೆ
  • ಭಾರತದಲ್ಲಿ ತಯಾರಿಸಿದ ಬಟ್ಟೆಗಳು
  • ಚರ್ಮದ ವಸ್ತುಗಳು
  • ದೋಣಿ, ಹಡಗು ತಯಾರಿಸಲು ಬಳಸುವ ಸಾಮಗ್ರಿಗಳ ಮೇಲಿನ ಕಸ್ಟಮ್ಸ್ ಮುಂದಿನ 10 ವರ್ಷದವರೆಗೆ ವಿನಾಯತಿ
  • ಝಿಂಕ್, ಲಿಥಿಯಮ್ ಬ್ಯಾಟರಿಯ ಸ್ಕ್ರ್ಯಾಪ್ ಮೇಲಿನ ತೆರಿಗೆ
  • ಮೊಬೈಲ್ ಫೋನ್ ತಯಾರಿಕೆಗೆ ಬಳಸುವ 28 ಸರಕುಗಳ ಮೇಲಿನ ತೆರಿಗೆ
  • ಮೀನಿನ ಪ್ಲೇಟಿನ ಮೇಲಿನ ತೆರಿಗೆ
  • ಇವಿ ಬ್ಯಾಟರಿಗಳ ಮೇಲಿನ ತೆರಿಗೆ
  • ಜೀವ ಉಳಿಸುವ ಔಷಧಗಳ ಮೇಲಿನ ತೆರಿಗೆ
  • ಖನಿಜಗಳ ಮೇಲಿನ ತೆರಿಗೆ

ಯಾವುದು ದುಬಾರಿ...

  • ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ ಮೇಲೆ ತೆರಿಗೆ
  • ಪ್ಲಾಸ್ಟಿಕ್‌ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.25ರಷ್ಟು ಹೆಚ್ಚಳ
  • ಟೆಲಿಕಾಂ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.10-ಶೇ.15ರಷ್ಟು ಹೆಚ್ಚಳ
  • ನೇಯ್ಗೆಯ ಬಟ್ಟೆಗಳು
  • ಐಶಾರಾಮಿ ಸರಕುಗಳು
  • ಆಲ್ಕೋಹಾಲ್‌
  • ತಂಬಾಕು
  • ಅನಗತ್ಯ ಆಮದು ವಸ್ತುಗಳು,
  • ಟೆಲಿಕಾಂ ಉಪಕರಣ
  • ಸಿಗರೇಟ್‌
  • ಚಿನ್ನ-ಬೆಳ್ಳಿ
  • ಆಮದು ಸುಂಕ ಏರಿಕೆ
  • ವಿಮಾನ ಇಂಧನ
  • ವಿಮಾನ ಟಿಕೆಟ್‌ ದರ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow