ಶ್ರೀಲೀಲಾ ಹೊಸ ಲುಕ್ಕಿಗೆ ಫ್ಯಾನ್ಸ್ ಫಿದಾ! ರೆಟ್ರೋ ಗೆಟಪ್‌ನಲ್ಲಿ ಮಿಂಚಿದ ಕನ್ನಡದ ಬೆಡಗಿ!

ರೆಟ್ರೋ ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಕನ್ನಡದ ಹುಡುಗಿ ಶ್ರೀ ಲೀಲಾ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಖುಷ್ ಆಗಿದ್ದಾರೆ.
ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಸಿನಿಮಾದಲ್ಲಿ ರೆಟ್ರೋ ಗೆಟಪ್‌ನಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಸೀರೆಯುಟ್ಟು ಜಡೆ ಹಾಕಿಕೊಂಡ ಹೊಸ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ. ಈ ಚಿತ್ರವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದಾರೆ.
ಕನ್ನಡದ ಬೆಡಗಿ ಶ್ರೀಲೀಲಾ ಪರಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹೊಸ ಸಿನಿಮಾದ ಅಪ್‌ಡೇಟ್ ಮೂಲಕ ನಟಿ ಸಿಹಿಸುದ್ದಿ ನೀಡಿದ್ದಾರೆ.
ಸದ್ಯ ಈ ಸಿನಿಮಾದ ಟೀಸರ್ ರಿವೀಲ್ ಆಗಿದ್ದು, ಕಾಲೇಜು ವಿದ್ಯಾರ್ಥಿಗಳ ಪಾಲಿಟಿಕ್ಸ್ ಕಥೆಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್, ಶ್ರೀಲೀಲಾ, ರವಿ ಮೋಹನ್, ಅಥರ್ವ ಸೇರಿದಂತೆ ಅನೇಕರು ನಟಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






