Caste Census REPORT: ಜಾತಿಗಣತಿ ವರದಿಯ ಅಂಕಿ-ಅಂಶ ಬಹಿರಂಗ: ಯಾವ ಜಾತಿ ಜನಸಂಖ್ಯೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಜಾತಿಗಣತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ನಡುವೆ ವರದಿ ಸೋರಿಕೆಯಾಗಿದ್ದು, ಯಾವ್ಯಾವ ಜಾತಿಯ ಜನಸಂಖ್ಯೆ ಎಷ್ಟು ಎನ್ನುವುದು ಇದೀಗ ಬಹಿರಂಗವಾಗಿದೆ. ಈ ಸಮೀಕ್ಷೆಗೆ ಒಟ್ಟು 5 ಕೋಟಿ 98 ಲಕ್ಷ 14 ಸಾವಿರದ 942 ಜನರು ಒಳಪಟ್ಟಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆ ಪ್ರಮಾಣದ ಬಗ್ಗೆ ಮಾಹಿತಿ ಇಲ್ಲಿದೆ.
ರಾಜ್ಯದ ಒಟ್ಟೂ ಜಾತಿಗಣತಿ ಸಂಖ್ಯೆ
ನಗರ – 2,04,02,006
ಗ್ರಾಮೀಣ – 3,94,12,936
ಒಟ್ಟು – 5,98,14,942
ವೀರಶೈವ ಲಿಂಗಾಯತ
ಒಟ್ಟು – 66,35,233
ಶೇ. 11.09
ನಗರ – 16,61862
ಗ್ರಾಮೀಣ – 4973371
ಒಕ್ಕಲಿಗರು
ಒಟ್ಟು – 61,68,652
ಶೇ. 10.31
ನಗರ – 16,95,514
ಗ್ರಾಮೀಣ – 44,73,138
ಕುರುಬ
ಒಟ್ಟು – 43,72,847
ಶೇ. 7.31
ನಗರ – 7,72,641
ಗ್ರಾಮೀಣ – 36,00,206
ಪರಿಶಿಷ್ಟ ಜಾತಿ
ಒಟ್ಟು – 1,09,29,347
ಶೇ.18.27
ನಗರ – 28,47,232
ಗ್ರಾಮೀಣ – 80,82,115
ಪರಿಶಿಷ್ಟ ಪಂಗಡ
ಒಟ್ಟು – 42,81,289
ಶೇ. 7.16
ನಗರ – 6,60,209
ಗ್ರಾಮೀಣ – 36,21,080
ಮುಸ್ಲಿಂ
ಒಟ್ಟು – 76,99,425
ಶೇ.12.87
ನಗರ – 44,63,030
ಗ್ರಾಮೀಣ – 32,36,395
ಬ್ರಾಹ್ಮಣ:
ಒಟ್ಟು – 15,64,741
ಶೇ.2.61
ನಗರ – 11,27,070
ಗ್ರಾಮೀಣ – 4,37,671
ರಾಜ್ಯದಲ್ಲಿ ಬರೋಬ್ಬರಿ 75.25 ಲಕ್ಷ ಮಂದಿ ಮುಸ್ಲಿಮರಿದ್ದಾರೆ. ಅಂದರೆ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ.18.70ರಷ್ಟು ಮಂದಿ ಮುಸ್ಲಿಮರು ಎಂದು ವರದಿ ಹೇಳಿದೆ. ಇದೇ ಕಾರಣಕ್ಕೆ ಪ್ರವರ್ಗ 2-ಬಿ ಅಡಿ ಕೇವಲ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಶೇ.4 ರಷ್ಟು ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಳ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಇನ್ನು ಅತಿ ಹಿಂದುಳಿದ ವರ್ಗಗಳ ಪ್ರವರ್ಗ 1-ಎ ಅನ್ನು ಎರಡು ಪ್ರವರ್ಗಗಳಾಗಿ ವಿಂಗಡಿಸಿದ್ದು ಪ್ರವರ್ಗ 2-ಎ ಅಡಿಯಲ್ಲಿದ್ದ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಒಂದರ ವ್ಯಾಪ್ತಿಗೆ ತಂದು ಪ್ರವರ್ಗ-1 ಎ ಹಾಗೂ ಪ್ರವರ್ಗ -1 ಬಿ ಎಂದು ಹೆಚ್ಚುವರಿ ವರ್ಗೀಕರಣ ಮಾಡಿದ್ದು ಎರಡೂ ಸೇರಿ 1.07 ಕೋಟಿ ಜನಸಂಖ್ಯೆ ಹೊಂದಿದ್ದಾರೆ.
ಮೂಲಗಳ ಪ್ರಕಾರ ಜಾತಿವಾರು ಅಂದಾಜಿನಂತೆ ಮುಸ್ಲಿಮರ ಸಂಖ್ಯೆ 76.99 ( ಅತಿ ಹಿಂದುಳಿದ ಪ್ರವರ್ಗದಲ್ಲಿರುವ ನಧಾಫ್, ಪಿಂಜಾರದಂತಹ ಜಾತಿಗಳು ಸೇರಿ ) ಲಕ್ಷಕ್ಕೆ ಏರಿಕೆಯಾಗಲಿದೆ. ನಂತರದ ಸ್ಥಾನದಲ್ಲಿ ಲಿಂಗಾಯತರು 66.35 ಲಕ್ಷ, ಒಕ್ಕಲಿಗರು 61.68 ಲಕ್ಷ, ಕುರುಬರು 43.72 ಲಕ್ಷ ಇದ್ದಾರೆ. ಉಳಿದಂತೆ ಬ್ರಾಹ್ಮಣರು 15.64 ಲಕ್ಷ ಜನರು ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರಾಜ್ಯದ ಅತಿ ದೊಡ್ಡ ಗುಂಪು (ಜಾತಿ) ಮುಸ್ಲಿಮರು ಎಂದು ಈ ವರದಿ ಸ್ಪಷ್ಟಪಡಿಸಿದಂತಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






