Chahal-Dhanashree Divorce: ಚಾಹಲ್- ಧನಶ್ರೀ ವೈವಾಹಿಕ ಜೀವನ ಅಂತ್ಯ: ಯುಜ್ವೇಂದ್ರ ಮಾಜಿ ಪತ್ನಿಗೆ ಸಿಕ್ಕ ಜೀವನಾಂಶವೆಷ್ಟು.?

ಮಾರ್ಚ್ 22, 2025 - 09:04
 0  10
Chahal-Dhanashree Divorce: ಚಾಹಲ್- ಧನಶ್ರೀ ವೈವಾಹಿಕ ಜೀವನ ಅಂತ್ಯ: ಯುಜ್ವೇಂದ್ರ ಮಾಜಿ ಪತ್ನಿಗೆ ಸಿಕ್ಕ ಜೀವನಾಂಶವೆಷ್ಟು.?

ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ಅವರ ವಿಚ್ಛೇದನ ವದಂತಿಗೆ ಕೊನೆಗೂ ತೆರೆ ಬಿದ್ದಿದೆ. ದಂಪತಿಗಳಿಬ್ಬರಿಗೆ ಇಂದು ಅಧಿಕೃತವಾಗಿ ವಿಚ್ಛೇದನ ಸಿಕ್ಕಿದೆ. ಸುಮಾರು ಎರಡೂವರೆ ವರ್ಷಗಳಿಂದ ಬೇರೆ ಬೇರೆ ವಾಸುತ್ತಿದ್ದ ಈ ಜೋಡಿಯ ವಿಚ್ಛೇದನ ಮೇಲ್ಮನವಿಯನ್ನು ಬಾಂದ್ರಾದ ಕೌಟುಂಬಿಕ ನ್ಯಾಯಾಲಯ ಅಂಗೀಕರಿಸಿದೆ. ಇದರೊಂದಿಗೆ, ಪ್ರೀತಿಸಿ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದ ಈ ಪ್ರಣಯ ಪಕ್ಷಿಗಳ ದಾಂಪತ್ಯ ಜೀವನ 4 ವರ್ಷ 3 ತಿಂಗಳಿಗೆ ಮುರಿದುಬಿದ್ದಿದೆ.

ಈ ಬೆನ್ನಲ್ಲೇ ಧನಶ್ರೀ ವರ್ಮಾಗೆ  ಸಿಕ್ಕ ಜೀವನಾಂಶದ ವಿಚಾರ ಚರ್ಚೆ ಆಗುತ್ತಿದೆ. ಚಹಲ್​ನಿಂದ ವಿಚ್ಛೇದನ ಪಡೆಯುತ್ತಿರುವುದಕ್ಕೆ ಧನಶ್ರೀಗೆ 4.75 ಕೋಟಿ ರೂಪಾಯಿ ಜೀವನಾಂಶ ಸಿಕ್ಕಿದೆ. ಇದನ್ನು ಕೆಲವರು ದಿನದ ಲೆಕ್ಕಕ್ಕೆ ಕೌಂಟ್ ಮಾಡಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಧನಶ್ರೀ ಹಾಗೂ ಚಾಹಲ್ 2020ರ ಡಿಸೆಂಬರ್​ನಲ್ಲಿ ವಿವಾಹ ಆದರು. ಗುರುಗ್ರಾಮದಲ್ಲಿ ಈ ವಿವಾಹ ನಡೆಯಿತು. ವೃತ್ತಿಯಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿರೋ ಧನಶ್ರೀ ನಾಲ್ಕು ವರ್ಷದ ಮೂರು ತಿಂಗಳ ಕಾಲ ಚಹಲ್ ಜೊತೆ ಸಂಸಾರ ನಡೆಸಿದರು. ಈಗ ಇವರು ಬೇರೆ ಆಗಿದ್ದಾರೆ. ಇದಕ್ಕಾಗಿ ಅವರು ಪಡೆಯುತ್ತಿರುವ ಹಣ ಬೋರಬ್ಬರಿ 4.75 ಕೋಟಿ ರೂಪಾಯಿ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಧನಶ್ರೀ ಅವರ ಒಂದು ದಿನದ ಗಳಿಕೆ ಎಷ್ಟಾಯಿತು ಎಂಬ ಲೆಕ್ಕಾಚಾರವನ್ನು ತೆಗೆದು ತೋರಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಹೇಳುವಾದಾದರೆ ಧನಶ್ರೀ ಅವರು ಚಹಲ್ ಜೊತೆ 1,550 ದಿನ ವಾಸ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಸಿಕ್ಕಿದ್ದು ಸುಮಾರು ಐದು ಕೋಟಿ. 1550 ದಿನವನ್ನು 4.75 ಕೋಟಿ ರೂಪಾಯಿನಲ್ಲಿ ಡಿವೈಡ್ ಮಾಡಿದಾಗ ಒಂದು ದಿನಕ್ಕೆ ಬರುವ ಮೊತ್ತ ಬರೋಬ್ಬರಿ 30 ಸಾವಿರ ರೂಪಾಯಿ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್​ಗಳ ಸುರಿಮಳೆ ಹರಿದು ಬಂದಿದೆ. ಅಂದಹಾಗೆ ಈ ರೀತಿ ಸಿಗುವ ಹಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow