Priyanka Chopra: ಪ್ರಿಯಾಂಕಾ ಚೋಪ್ರಾ ಹೊಕ್ಕಳಿಗೆ ಧರಿಸಿದ ಡೈಮಂಡ್ ರಿಂಗ್ ಬೆಲೆ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ..!

ಎಪ್ರಿಲ್ 6, 2025 - 18:02
 0  12
Priyanka Chopra: ಪ್ರಿಯಾಂಕಾ ಚೋಪ್ರಾ ಹೊಕ್ಕಳಿಗೆ ಧರಿಸಿದ ಡೈಮಂಡ್ ರಿಂಗ್ ಬೆಲೆ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ..!

ಗ್ಲೋಬಲ್‌ ಐಕಾನ್‌ ಪ್ರಿಯಾಂಕಾ ಚೋಪ್ರಾ ಇದೀಗ ಬಹಳ ವರ್ಷಗಳ ಬಳಿಕ ಭಾರತೀಯ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಟಾಲಿವುಡ್‌ನ ಎಸ್‌.ಎಸ್‌.ರಾಜಮೌಳಿ ಮತ್ತು ಮಹೇಶ್‌ ಬಾಬು ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಎಸ್‌ಎಸ್‌ಎಂಬಿ 29' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಹೊಕ್ಕಳಿಗೆ ಧರಿಸಿದ 2.7 ಕೋಟಿ ರೂ. ಮೌಲ್ಯದ ಡೈಮಂಡ್ ರಿಂಗ್ ವಿಚಾರವಾಗಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಕೋ-ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲೀಶ್ ಲುಕ್ ಫ್ಯಾನ್ಸ್ ಗಮನ ಸೆಳೆದಿದೆ. ಅದರಲ್ಲೂ ಪ್ರಿಯಾಂಕಾ ಹೊಕ್ಕಳಿಗೆ ಧರಿಸಿದ ಬೆಲ್ಲಿ ಬಟನ್ ಡೈಮಂಡ್ ಪಿನ್ ಇದರ ಬೆಲೆ ಕೇಳಿ ಗಾಬರಿಯಾಗಿದ್ದಾರೆ.

ಇದರ ಬೆಲೆ ಬರೋಬ್ಬರಿ 2.7 ಕೋಟಿ ರೂ. ಮೌಲ್ಯದಾಗಿದೆ ಎಂದು ಕೇಳಿಯೇ ಅಭಿಮಾನಿಗಳು ದಂಗಾಗಿದ್ದಾರೆ. ಇನ್ನೂ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಲೀಡ್ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಎಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ತಿದ್ದಾರೆ.

ಈಗಾಗಲೇ ಹೈದರಾಬಾದ್, ಒಡಿಶಾ, ವಿಶಾಖಪಟ್ಟಣಂ ಸೇರಿದಂತೆ ಹಲವೆಡೆ ಚಿತ್ರೀಕರಣದಲ್ಲಿ ನಟಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ನಡೆಯುತ್ತಿದೆ.‌ ಸಿನಿಮಾದ ಹೆಚ್ಚಿನ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow