Chicken For Street Dogs: ಕಾಂಗ್ರೆಸ್ ಸರ್ಕಾರದಿಂದ ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯ..!

ಬೆಂಗಳೂರು: ರಾಜಧಾನಿಯ ಬೀದಿ ನಾಯಿಗಳಿಗೆ ಬೌಬೌ ಬಿಸಿ ಭೋಜನ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುಮಾರು ₹2.88 ಕೋಟಿಗಳ ವೆಚ್ಚದಲ್ಲಿ 5,000ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ದಿನನಿತ್ಯ ಚಿಕನ್ ರೈಸ್ ಆಹಾರ ನೀಡಲು ತೀರ್ಮಾನಿಸಿದೆ.
ಹೆಸರೇನು ಗೊತ್ತಾ? ಈ ಯೋಜನೆಗೆ ಇತ್ತೀಚೆಗಷ್ಟೇ “ಕುಕುರ್ ತಿಹಾರ್” ಎಂಬ ಹೆಸರು ಇಟ್ಟಿದ್ದು, ತೀವ್ರ ವಿರೋಧದ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈಗ ಹೊಸ ರೂಪದಲ್ಲಿ ಯೋಜನೆಗೆ ಜೀವ ನೀಡಲಾಗುತ್ತಿದೆ.
ಯೋಜನೆಯ ವಿವರಗಳು:
ಪ್ರತಿ ನಾಯಿಗೆ ₹22.42 ವೆಚ್ಚದಲ್ಲಿ 367 ಗ್ರಾಂ ತೂಕದ ಆಹಾರ.
ಆಹಾರದ ಅಂಶಗಳು:
100 ಗ್ರಾಂ ರೈಸ್ (ಕಾರ್ಬೋಹೈಡ್ರೇಟ್),
150 ಗ್ರಾಂ ಚಿಕನ್ (ಪ್ರೋಟೀನ್),
10 ಗ್ರಾಂ ಎಣ್ಣೆ (ಫ್ಯಾಟ್),
100 ಗ್ರಾಂ ತರಕಾರಿ (ವಿಟಮಿನ್-ಮಿನರಲ್ಸ್),
5 ಗ್ರಾಂ ಉಪ್ಪು, 2.5 ಗ್ರಾಂ ಅರಿಶಿಣ.
ತಜ್ಞರಿಂದ ನಿಗದಿಯಾದ ಆಹಾರದ ಪ್ರಮಾಣ ನಾಯಿಗಳ ತೂಕವನ್ನು ಆಧಾರವಾಗಿಟ್ಟುಕೊಂಡು ನಿಗದಿಯಾಗುತ್ತದೆ. ಈಗಾಗಲೇ ಯೋಜನೆಗೆ ಸಂಬಂಧಿಸಿದ ಕ್ರಿಯಾ ಯೋಜನೆ ಆಯುಕ್ತರಿಗೆ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕ ಬಳಿಕ ಗುತ್ತಿಗೆದಾರರನ್ನು ಆಯ್ಕೆ ಮಾಡಿ ಆಹಾರ ತಯಾರಿ ಪ್ರಾರಂಭವಾಗಲಿದೆ.
ಅಡುಗೆ ವ್ಯವಸ್ಥೆ:
ಈ ಹಿಂದೆ ಹೋಟೆಲ್ಗಳಿಂದ ಟೈ-ಅಪ್ ಮಾಡಿಕೊಂಡಿದ್ದ ಈ ಯೋಜನೆ, ಈಗ ಪ್ರತ್ಯೇಕ ಅಡುಗೆ ಗುತ್ತಿಗೆದಾರರ ಮೂಲಕ ಜಾರಿಗೆ ಬರಲಿದೆ. ಬೆಂಗಳೂರಿನ ಎಂಟು ವಲಯಗಳಲ್ಲಿ ಪ್ರತಿದಿನ ಚಿಕನ್ ರೈಸ್ ತಯಾರಿಸಲಾಗುವುದು.
ಬಿಬಿಎಂಪಿಯ ವಿಶೇಷ ಆಯುಕ್ತ ಸುರಾಲ್ಕರ್ ವಿಕಾಸ್ ಕಿಶೋರ್ ಅವರ ಮಾತು:
“ನಮ್ಮ ಪಶುವೈದ್ಯರ ಮಾರ್ಗದರ್ಶನದಲ್ಲಿ ಆಹಾರದ ಪ್ರಮಾಣ ನಿಗದಿಯಾಗಲಿದೆ. ಯೋಜನೆ ಅನುಮೋದನೆಯ ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






