ವಿದ್ಯಾರ್ಥಿಗಳ ಗಮನಕ್ಕೆ.. ಈ ಬಾರಿ SSLC ಪರೀಕ್ಷೆಯಲ್ಲಿ ಪಾಸಿಂಗ್ ಗ್ರೇಸ್ ಅಂಕ ಇರೋದಿಲ್ಲ: ಮಧು ಬಂಗಾರಪ್ಪ

ಫೆಬ್ರವರಿ 3, 2025 - 18:01
 0  20
ವಿದ್ಯಾರ್ಥಿಗಳ ಗಮನಕ್ಕೆ.. ಈ ಬಾರಿ SSLC ಪರೀಕ್ಷೆಯಲ್ಲಿ ಪಾಸಿಂಗ್ ಗ್ರೇಸ್ ಅಂಕ ಇರೋದಿಲ್ಲ: ಮಧು ಬಂಗಾರಪ್ಪ

ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಸಲ ಗ್ರೇಸ್ ಮಾರ್ಕ್ಸ್ ಹೆಚ್ಚಿಸಿದ್ದಕ್ಕೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಸಿಎಂ ಸಭೆಯಲ್ಲಿ ಕೂಡ SSLC ಪರೀಕ್ಷೆಯಲ್ಲಿ 20%ರಷ್ಟು ಗ್ರೇಸ್ ಮಾರ್ಕ್ಸ್‌ ನೀಡಿದರ ಬಗ್ಗೆ ಚರ್ಚೆ ನಡೆಸಿ ಕ್ಯಾನ್ಸಲ್‌ ಮಾಡಲಾಗಿತ್ತು. ಇದೀಗ ಇದಕ್ಕೆ ಸಂಬಂಧ ಪಟ್ಟಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಮಕ್ಕಳಿಗೆ ಬೇಕಾದ ಮಾರ್ಗದರ್ಶನ ನೀಡುವ ಸಲುವಾಗಿ ನಾವು ಸಿದ್ದತೆ ಮಾಡ್ತಿದ್ದೇವೆ.

ಮಕ್ಕಳು ಹಾಗೂ ಅಧಿಕಾರಿಗಳಿಂದ ಅಭಿಪ್ರಾಯ ಪಡೆಯಲಾಗಿದೆ. ಜಿಲ್ಲಾ ಹಂತದಲ್ಲಿ ಇರೋ ಸಮಸ್ಯೆ, ಚಿತ್ರಣದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಫಲಿತಾಂಶ ವಿಚಾರವಾಗಿ ನಾವು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಿದ್ದೇವೆ, ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಭಯ ಇರ್ಬಾರ್ದು. ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಮಾಡುವುದರ ಬದಲು ಮುಂಚಿತವಾಗಿ ನಾವು ಎಚ್ಚರಗೊಂಡಿದ್ದೇವೆ ಎಂದರು.

ಇಡೀ ರಾಜ್ಯದಲ್ಲಿ ಜಿಲ್ಲಾ ಹಂತದ ಸಾಧನೆ ಪ್ರಗತಿ ಹಾಗೂ ಸಮಸ್ಯೆ, ಕ್ರಮಗಳ ಕುರಿತು ಚರ್ಚಿಸಲಾಗಿದೆ. ಈ ಬಾರಿ ಪಾಸಿಂಗ್ ಗ್ರೇಸ್ ಅಂಕ ಇರೋದಿಲ್ಲ, ಕಳೆದ ಬಾರಿ ವೆಬ್ ಕಾಸ್ಟಿಂಗ್ ಗೆ ನಿಗದಿ ಪಡಿಸಿದ 10% ಗ್ರೇಸ್ ಅಂಕಗಳು ಇರೋದಿಲ್ಲ ಎಂದು ಸ್ಪಷ್ಟನೆ ನೀಡಿದರು. ಒಂದು ದಿನ‌ ಒಂದು ಅಂಕ ಕಾರ್ಯಕ್ರಮ ಯಾದಗಿರಿ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಇಓಗಳಿಂದ ನೇರವಾಗಿ ಶಾಲೆಗಳಲ್ಲಿ ಮಕ್ಕಳಿಗೆ ಮಾಕ್ ಟೆಸ್ಟ್ ಮಾಡಲಾಗಿದೆ, ಮಾಕ್ ಟೆಸ್ಟ್‌ ನಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗಿದೆ. ಮಾಕ್ ಟೆಸ್ಟ್ ಮಾಡಿರೋ ಕಾರಣ ಅಂತಿಮ ಪರೀಕ್ಷೆಗೆ ಸಹಕಾರವಾಗಲಿದೆ ಎಂದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow