ಮಾಜಿ RCB ಆಟಗಾರನ ವೇಗದ ಬೌಲಿಂಗ್! ದಂಗಾದ ಪ್ರೇಕ್ಷಕರು!

ಡಿಸೆಂಬರ್ 8, 2024 - 09:53
 0  8
ಮಾಜಿ RCB ಆಟಗಾರನ ವೇಗದ ಬೌಲಿಂಗ್! ದಂಗಾದ ಪ್ರೇಕ್ಷಕರು!

IPL 2025 ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟ ಪ್ರಮುಖ ಫಾಸ್ಟ್ ಬೌಲರ್ ಅಂದ್ರೆ ಅದು ಸೀರಜ್. ಸುಮಾರು ವರ್ಷಗಳಿಂದ RCB ಭಾಗವಾಗಿದ್ದ ಇವರನ್ನು ಕೈ ಬಿಟ್ಟಿದ್ದು, ನಿಜಕ್ಕೂ ಅಭಿಮಾನಿಗಳೇ ಶಾಕ್ ಆಗಿದ್ದರು. 

ಇದೀಗ ಸಿರಾಜ್ ಅವರ ಸಧ್ಯದ ಫಾರ್ಮ್ ನೋಡಿದ್ರೆ ಎದುರಾಳಿಗಳು ನಡುಗೋದು ಗ್ಯಾರಂಟಿ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್​ನಲ್ಲಿ ಮೊಹಮ್ಮದ್ ಸಿರಾಜ್ ಬರೋಬ್ಬರಿ 181.6 kph ವೇಗದಲ್ಲಿ ಚೆಂಡೆಸೆದಿದ್ದಾರೆ ಎಂದು ತೋರಿಸಲಾಗಿದೆ. ಅಂದರೆ ಇದು ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಬೌಲ್. ಆದರೆ ಇಂತಹದೊಂದು ವಿಶ್ವ ದಾಖಲೆಯನ್ನು ಖುದ್ದು ಸಿರಾಜ್​ ಕೂಡ ನಂಬಲು ಸಿದ್ಧರಿರಲಿಲ್ಲ.

ಏಕೆಂದರೆ ಅದು ಸ್ಪೀಡ್ ಗನ್ (ಸ್ಪೀಡ್ ಮೀಟರ್) ಎಡವಟ್ಟಿನಿಂದಾಗಿ ತೋರಿಸಲಾದ ವೇಗವಾಗಿತ್ತು. ಸಾಮಾನ್ಯವಾಗಿ 130-140ರ ಅಸುಪಾಸಿನಲ್ಲಿ ಚೆಂಡೆಸೆಯುವ ಸಿರಾಜ್ ಎಸೆದ 25ನೇ ಓವರ್​ನ 5ನೇ ಎಸೆತದ ವೇಗವನ್ನು ಅಡಿಲೇಡ್ ಮೈದಾನದ ಸ್ಕ್ರೀನ್​ನಲ್ಲಿ 181.6 kph ವೇಗ ಎಂದು ತಪ್ಪಾಗಿ ತೋರಿಸಲಾಗಿತ್ತು. ಇದನ್ನು ನೋಡಿ ಪ್ರೇಕ್ಷಕರು ಕೂಡ ದಂಗಾದರು.

ಆದರೆ ಆ ಬಳಿಕ ಈ ತಪ್ಪನ್ನು ಸರಿಪಡಿಸಿಕೊಳ್ಳಲಾಗಿದೆ. ಸ್ಪೀಡ್ ಗನ್​ ಎರರ್​ನಿಂದಾಗಿ ಮೊಹಮ್ಮದ್ ಸಿರಾಜ್ ಅವರ ಎಸೆತವು 181.6 kph ವೇಗದಿಂದ ಕೂಡಿತ್ತು ಎಂದು ತೋರಿಸಲಾಗಿದ್ದು, ಆದರೆ ಆ ಚೆಂಡು 135ರ ಅಸುಪಾಸಿನ ವೇಗದಲ್ಲಿ ಸಾಗಿದೆ ಎಂದು ತಿಳಿಸಲಾಗಿದೆ. ಇದರೊಂದಿಗೆ ಒಂದು ಕ್ಷಣಕ್ಕೆ ದಂಗಾದ ಪ್ರೇಕ್ಷಕರು ನಿರಾಳರಾದರು.

ಅಂದಹಾಗೆ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನದ ಶೊಯೇಬ್ ಅಖ್ತರ್ ಹೆಸರಿನಲ್ಲಿದೆ. 2003ರ ಏಕದಿನ ವಿಶ್ವಕಪ್​ನ ಇಂಗ್ಲೆಂಡ್ ವಿರುದ್ಧದ​ ಪಂದ್ಯದಲ್ಲಿ ಅಖ್ತರ್ 161.3 kph ವೇಗದಲ್ಲಿ ಚೆಂಡೆಸೆದು ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow